ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೈಟ್ ನೈಟ್ ಕರ್ಫ್ಯೂಗೆ ಕ್ಷಣಗಣನೆ ಶುರುವಾಗಿದ್ದು, ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಸಂಪೂರ್ಣ ಲಾಕ್ ಆಗಲಿವೆ. ರಾತ್ರಿ 9:30ರಿಂದ ಎಲ್ಲ ಪ್ರಮುಖ ರಸ್ತೆ, ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗುತ್ತಿದೆ. ರಾತ್ರಿ 10 ಗಂಟೆ ಬಳಿಕ ಅನವಶ್ಯಕವಾಗಿ ಸಂಚರಿಸುತ್ತಿರುವುದು ಖಾತ್ರಿಯಾದಲ್ಲಿ ಬೈಕ್ ಸೀಜ್ ಮಾಡಿ, ಪ್ರಕರಣ ದಾಖಲಿಸಲಾಗುತ್ತದೆ. ಬೆಂಗಳೂರಿನ ಯಾವ ವಿಭಾಗದಲ್ಲಿ ಎಲ್ಲೆಲ್ಲಿ ನಾಕಾಬಂದಿ ಇರುತ್ತೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಆಗ್ನೇಯ ವಿಭಾಗದ ವೀರಸಂದ್ರ ಚೆಕ್ ಪೋಸ್ಟ್, ಬೋಮ್ಮನಹಳ್ಳಿ ಚೆಕ್ ಪೋಸ್ಟ್, ಸಿಲ್ಕ್ ಬೋರ್ಡ್, ಮಡಿವಾಳ, ಸೆಂಟ್ಸ್ ಜಾನ್ಸ್, ಆಡುಗೋಡಿ ಜಂಕ್ಷನ್, ಕೋರಮಂಗಲ ಎನ್ ಜಿವಿ ಕಾಂಪ್ಲೇಕ್ಸ್ ಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಪಶ್ಚಿಮ ವಿಭಾಗದಲ್ಲಿ ಕೆ.ಆರ್.ಮಾರ್ಕೆಟ್ ಮೇಲ್ಸೇತುವೆ, ಮಾರ್ಕೆಟ್ ಸರ್ಕಲ್, ಮೈಸೂರು ರಸ್ತೆ, ಕೆಂಗೇರಿ ಮುಖ್ಯರಸ್ತೆ, ಕೆ.ಪಿ.ಅಗ್ರಹಾರ, ಮಾಗಡಿ ರೋಡ್ ಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಈಶಾನ್ಯ ವಿಭಾಗದ ಏರ್ ಪೋರ್ಟ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಸಂಪಿಗೆ ಹಳ್ಳಿ, ವಿದ್ಯಾರಣ್ಯಪುರ ಸರ್ಕಲ್, ಬಿಇಎಲ್ ಸರ್ಕಲ್ ಹಾಗೂ ಯಲಹಂಕ ಮುಖ್ಯರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಪೂರ್ವ ವಿಭಾಗದಲ್ಲಿ ಟ್ರಿನಿಟಿ ಸರ್ಕಲ್, ಬಿಆರ್ ವಿ ಜಂಕ್ಷನ್, ನಾಗವಾರ ಜಂಕ್ಷನ್, ಬಾಣಸವಾಡಿ, ಕಮ್ಮನಹಳ್ಳಿ ರೋಡ್, ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್, ಓಲ್ಡ್ ಏರ್ ಪೋರ್ಟ್ ರೋಡ್, ಕೇಂದ್ರ ವಿಭಾಗದಲ್ಲಿ ಕೆ.ಆರ್.ಸರ್ಕಲ್, ಟೌನ್ ಹಾಲ್, ಚಿನ್ನಸ್ವಾಮಿ ಸ್ಟೇಡಿಯಂ, ಕಾರ್ಪೋರೇಷನ್ ಸರ್ಕಲ್ ಬಂದ್ ಮಾಡಲಾಗುತ್ತಿದೆ.
ಉತ್ತರ ವಿಭಾಗದದಲ್ಲಿ ಯಶವಂತಪುರ ಸರ್ಕಲ್, ತುಮಕೂರು ರಸ್ತೆ, ಗಂಗಮ್ಮಗುಡಿ ಸರ್ಕಲ್, ಗೋರಗುಂಟೆ ಪಾಳ್ಯ ಹಾಗೂ ಪೀಣ್ಯ ಸೇರಿದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಲಾಕ್ ಆಗುತ್ತಿವೆ.