ಮುಂಬೈ: ಬೆಂಕಿ ಅವಘಡದಲ್ಲಿ ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಪುಣೆಯ ಪ್ರಸಿದ್ಧ ಫ್ಯಾಷನ್ ಸ್ಟ್ರೀಟ್ ಮಾರ್ಕೆಟ್‍ನಲ್ಲಿ ನಡೆದಿದೆ
Maharashtra: Fire breaks out at Fashion Street market in Camp area of Pune. Fire tenders rushed to the spot. More details awaited. pic.twitter.com/EMepVu2TdE
— ANI (@ANI) March 26, 2021
ಶುಕ್ರವಾರ ರಾತ್ರಿ 11 ಗಂಟೆಗೆ ಸಂಭವಿಸಿದ ಅವಘಡದಲ್ಲಿ ಅಂಗಡಿಗಳು ಸುಟ್ಟು ಹೋಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ 16 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.
Maharashtra: Over 500 shops gutted in a fire that broke out at Fashion Street market in Pune last night. Around 16 fire tenders deployed to extinguish the fire. Latest visuals from the spot. pic.twitter.com/LWQueLwlKg
— ANI (@ANI) March 27, 2021
ಮಧ್ಯರಾತ್ರಿ 1 ಗಂಟೆಗೆ ಸುಮಾರಿಗೆ ಬೆಂಕಿ ನಂದಿಸುವ ಕಾರ್ಯ ತಹಬಂದಿಗೆ ಬಂದಿತ್ತು. ಆದರೆ ಅಷ್ಟರಲ್ಲಾಗಲೇ 500 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಇನ್ನೂ ತಿಳಿದಿಲ್ಲ. ಪುಣೆ ಕಂಟೋನ್ಮೆಂಟ್ ಬೋರ್ಡ್ (ಪಿಸಿಬಿ) ಪ್ರದೇಶದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫ್ಯಾಶನ್ ಸ್ಟ್ರೀಟ್ ಪ್ರಸಿದ್ಧ ವಿಂಡೋ ಶಾಪಿಂಗ್ ತಾಣವಾಗಿದ್ದು, ಇದು ಉಡುಪುಗಳು, ಬೂಟುಗಳು, ಕನ್ನಡಕಗಳು ಮತ್ತು ಇತರ ಪರಿಕರಗಳನ್ನು ಮಾರಾಟ ಮಾಡುವ ಸಣ್ಣ ಮಳಿಗೆಗಳನ್ನು ಹೊಂದಿದೆ. ಇಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಅಂಗಡಿಗಳು ಸುಟ್ಟು ಭಸ್ಮವಾಗಿವೆ.