– ಬ್ರೇಕ್ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ದುರಂತ
ತಿರುವನಂತಪುರಂ: ಕೆಎಸ್‌ಆರ್‌ಟಿಸಿ ಬಸ್ಸೊಂದು ಬೃಹತ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಕೊಚ್ಚಿಯ ಚಕ್ಕರಪರಂಬು ಬಳಿ ಇಂದು ಮುಂಜಾನೆ ನಡೆದಿದೆ.
Advertisement
ಮೃತ ಚಾಲಕನನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ತಿರುವನಂತಪುರಂ ನಿವಾಸಿ. ಬಸ್ ತಿರುವನಂತಪುರಂನಿಂದ ಕೋಯಿಕ್ಕೋಡ್ ಕಡೆ ತೆರಳುತ್ತಿತ್ತು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.
Advertisement
ವೈಟಿಲ್ಲಾ ಸಾರಿಗೆ ಕೇಂದ್ರದಿಂದ 2 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ದುರಂತಕ್ಕೂ ಮುನ್ನ 5-10 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಳ್ಳಲಾಗಿತ್ತು. ಹೀಗೆ ಬ್ರೇಕ್ ತೆಗೆದುಕೊಂಡ ಬಳಿಕ ಚಲಿಸಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮರವೊಂದಕ್ಕೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
Advertisement
Kerala: A person dies, 25 others injured as bus rams into a tree near Chakkaraparambu in Kochi early morning today, say Kochi Police pic.twitter.com/UJrH8Glx3T
— ANI (@ANI) November 30, 2020
Advertisement
ಕೆಲ ದಿನಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ದೆಹಲಿ- ಜೈಪುರ ಹೆದ್ದಾರಿಯಲ್ಲಿ ನಡೆದಿತ್ತು. ಚಲಿಸುತ್ತಿದ್ದ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ದಾರುಣವಾಗಿ ಮೃತಪಟ್ಟಿದ್ದರು.