ಮುಂಬೈ: ಬಾಲಿವುಡ್ ಅಂಗಳದಲ್ಲಿ ಕೊರೊನಾ ತನ್ನ ನರ್ತನ ಮುಂದುವರಿಸಿದ್ದು, ನಟ ಅಕ್ಷಯ್ ಕುಮಾರ್ ಬಳಿಕ ಗೋವಿಂದ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಗೋವಿಂದ ಸದ್ಯ ಕ್ವಾರಂಟೈನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ಗೋವಿಂದ ಅವರ ಕೋವಿಡ್ ವರದಿ ಬಂದಿದೆ.
Advertisement
ಮುನ್ನೆಚ್ಚರಿಕೆ ಕ್ರಮಗಳನ್ನ ಗೋವಿಂದ ತೆಗೆದುಕೊಳ್ಳುತ್ತಿದ್ದರು. ಚಿತ್ರೀಕರಣ ವೇಳೆಯೂ ಸರ್ಕಾರ ಕೊರೊನಾ ನಿಯಮಗಳನ್ನ ಪಾಲಿಸಲಾಗುತ್ತಿತ್ತು. ಅದಾಗಿಯೂ ಅವರಿಗೆ ಸೋಂಕು ತಗುಲಿದೆ. ಕಳೆದೊಂದು ವಾರದಿಂದ ಗೋವಿಂದ ಅವರ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ ಎಂದು ಗೋವಿಂದ ಅವರ ಆಪ್ತ ಹೇಳಿದ್ದಾರೆ.
Advertisement
Advertisement
ಅಕ್ಷಯ್ ಕುಮಾರ್ ಗೆ ಕೊರೊನಾ: ನನ್ನ ಕೋವಿಡ್-19 ವರದಿ ಪಾಸಿಟಿವ್ ಬಂದಿದೆ. ಸದ್ಯ ಕೋವಿಡ್ನ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದು, ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ನಲ್ಲಿದ್ದೇನೆ ಹಾಗೂ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ಕೋವಿಡ್ ಪರೀಕ್ಷೆಗೆ ತಮ್ಮನ್ನು ತಾವು ಒಳಪಡಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ ಹಾಗೂ ಜಾಗೃತರಾಗಿರಿ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಆ್ಯಕ್ಷನ್ ಮೂಲಕ ಮತ್ತೆ ಹಿಂದಿರುಗುತ್ತೇನೆ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.