ನೆಲಮಂಗಲ: ಕೋವಿಡ್-19 ಹಿನ್ನೆಲೆಯಲ್ಲಿ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಸಾವಿರಾರು ಬಿಹಾರಿ ಕಾರ್ಮಿಕ ಕುಟುಂಬಗಳಿಗೆ ಆಹಾರ ವಿತರಣೆ ಮಾಡಲಾಯಿತು.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರದ ಬಿಐಇಸಿ ಮೈದಾನದಲ್ಲಿ ಬ್ರೆಡ್, ಬಾಳೆಹಣ್ಣು, ನೀರು ವಿತರಣೆ ಮಾಡಿದರು. ಇಂದು ಸಂಜೆ ಸುಮಾರು 1300 ಮಂದಿ ಬಿಹಾರಿ ಜನರಿಗೆ ರಾಜ್ಯ ಸರ್ಕಾರ ರೈಲು ವ್ಯವಸ್ಥೆ ಮಾಡಲಾಗಿದ್ದು, ವಲಸಿಗ ಕಾರ್ಮಿಕರು ತೆರಳಲಿದ್ದಾರೆ.
Advertisement
Advertisement
ಈ ವೇಳೆ ಎಲ್ಲರಿಗೂ ಆಹಾರ ವ್ಯವಸ್ಥೆ ನೀಡಿ ಕಾರ್ಮಿಕರಿಗೆ ಧೈರ್ಯ ನೀಡಿದ ದಾಸರಹಳ್ಳಿಯ ಶೆಟ್ಟಿಹಳ್ಳಿಯ ಸಾಯಿ ಫೌಂಡೇಶನ್ ಬಿ.ಸುರೇಶ್, ಕಾರ್ಮಿಕರಿಗೆ ನೈತಿಕ ಬಲ ತುಂಬಿದ್ದಾರೆ. ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿ, ರಾಜ್ಯ ಸರ್ಕಾರದಿಂದ ಉಚಿತ ಬಸ್ ಹಾಗೂ ರೈಲ್ವೆ ವ್ಯವಸ್ಥೆ ಮಾಡಲಿಗಿದ್ದು, ಪೊಲೀಸರ ಭದ್ರತೆಯಲ್ಲಿ 1300 ಕಾರ್ಮಿಕರ ತಪಾಸಣೆ ನಡೆಯುತ್ತಿದೆ. ಇಂದು ಸಂಜೆ ಚಿಕ್ಕಬಾಣವಾರದಿಂದ ಬಿಹಾರಕ್ಕೆ ರೈಲು ವ್ಯವಸ್ಥೆ ಮಾಡಲಾಗಿದ್ದು, ವಲಸಿಗ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳಲಿದ್ದಾರೆ.
Advertisement
Advertisement
ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಶ್ರೀ ಸಾಯಿ ಫೌಂಡೇಶನ್ ನ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ಈ ಕಾರ್ಮಿಕರು ಸಾಕಷ್ಟು ವರ್ಷದಿಂದ ನಮ್ಮ ರಾಜ್ಯ ಹಾಗೂ ಬೆಂಗಳೂರಿನಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿ ತಮ್ಮ ಜೀವನ ನಡೆಸುತಿದ್ದರು. ಆದರೆ ಈ ಕೊರೊನಾ ವೈರಸ್ ಭೀತಿಯಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದಾರೆ. ಇಂದು ನಮ್ಮ ರಾಜ್ಯ ಸರ್ಕಾರ ಅವರ ರಾಜ್ಯಕ್ಕೆ ತೆರಳಲು ರೈಲು ವ್ಯವಸ್ಥೆ ಮಾಡಿದ್ದು, ಈ ವೇಳೆ ನಮ್ಮ ಸಾಯಿ ಫೌಂಡೇಶನ್ ವತಿಯಿಂದ ನಮ್ಮ ಸೇವೆಯಲ್ಲಿ ಸಲ್ಲಿಸಿ ನಮ್ಮ ತಂಡ ಸಾಮಾಜಿಕ ಅಂತರ ಕಾಯ್ದು ವಿತರಣೆ ಮಾಡಿದ್ದು ನಮ್ಮಗೆ ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಮಂಜುನಾಥ್, ಕೃಷ್ಣ, ವಿನೋದ್ ಮತ್ತಿತರರು ಆಹಾರ ವಿತರಣೆಯಲ್ಲಿ ಭಾಗಿಯಾಗಿದ್ದರು.