ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ದೇಹಕ್ಕೆ ತಂಪಾದ ಆಹಾರ ಪದಾರ್ಥಗಳ ಅವಶ್ಯಕತೆ ಇರುತ್ತದೆ. ಅಂಗಡಿಯಲ್ಲಿ ಸಿಗುವ ಜ್ಯೂಸ್ ಹಾಗೂ ತಂಪಾದ ಪಾನಿಯಗಳನ್ನು ಕುಡಿಯುವ ಬದಲಾಗಿ ನೀವೇ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಜೋಳದ ಅಂಬಲಿಯನ್ನು ಮಾಡಿ ಪ್ರತಿನಿತ್ಯ ಬೆಳಗ್ಗೆ ಸೇವಿಸಬಹುದಾಗಿದೆ. ಅಂತೆಯೇ ಅತ್ಯಂತ ಸುಲಭ ಹಾಗೂ ಸತಿ ಬೇಗನೆ ತಯಾರಿಸಬಹುದಾದ ಜೋಳದ ಅಂಬಲಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ನೀವೂ ಒಂದು ಬಾರಿ ಟ್ರೈ ಮಾಡಿ..
Advertisement
ಬೇಕಾಗುವ ಸಾಮಗ್ರಿಗಳು:
* ಜೋಳದ ಹಿಟ್ಟು- 1 ಕಪ್
* ಬೆಳ್ಳುಳ್ಳಿ – 4 ರಿಂದ 5
* ಜೀರಿಗೆ ಪೌಡರ್- ಅರ್ಧ ಸ್ಪೂನ್
* ಶುಂಠಿ ಪೇಸ್ಟ್- ಅರ್ಧ ಸ್ಪೂನ್
* ಕೊತ್ತಂಬರಿ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಪಾತ್ರೆಗೆ ಅರ್ಧ ಲೋಟದಷ್ಟು ನೀರು ಹಾಕಿ ನಂತರ ಅದಕ್ಕೆ ಜೋಳದ ಹಿಟ್ಟು ಬೆರೆಸಿ, ಹಿಟ್ಟು ಗಂಟು ಆಗದ ರೀತಿಯಲ್ಲಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು. ಇದನ್ನು ಓದಿ : ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ
Advertisement
* ಇತ್ತ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಗೆ ಇಟ್ಟಿರಬೇಕು. ನೀರು ಬಿಸಿಯಾದ ನಂತರ ಆ ಪಾತ್ರೆಗೆ ನಾವು ಈ ಮೊದಲೇ ತಯಾರಿಸಿದ ಜೋಳದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಮೊಸರು ಹಾಕಿ ಸ್ಪೂನ್ ನಲ್ಲಿ ತಿರುಗಿಸಿ ತೆಳುವಾಗಿ ಬರುವಂತೆ ಮಾಡಬೇಕು. ಇದನ್ನು ಓದಿ : ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ
* ಈ ಮೊದಲೇ ನಾವು ಕುದಿಸಿ ತಯಾರಿಸಿದ ಜೋಳದ ಗಂಜಿ ಮತ್ತು ಮಜ್ಜಿಗೆ ಎರಡನ್ನು ಒಂದೇ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.ಇದನ್ನು ಓದಿ : ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ
* ನಂತರ ಈ ಕೊತ್ತಂಬರಿಯನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ಆರೋಗ್ಯಕರವಾದ ತಂಪುಪಾನೀಯ ಮನೆಯಲ್ಲಿಯೇ ತಯಾರಿಸಿ ಸವಿಯಿರಿ. ಇದನ್ನು ಓದಿ : ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ರಾಗಿ ಗಂಜಿ ಮಾಡೋ ವಿಧಾನ