ಬೀದರ್: ಬಿಜೆಪಿಯವರು ನಾಯಕತ್ವ ಬದಲಾವಣೆಯ ನಾಟಕವಾಡುತ್ತಿದ್ದಾರೆ ಎಂದು ಬೀದರ್‍ನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: WTC ಫೈನಲ್ ಟಾಸ್ ಗೆದ್ದ ಕೇನ್ ವಿಲಿಯಮ್ಸನ್-ಬ್ಯಾಟಿಂಗ್ ಆರಂಭಿಸಿದ ಭಾರತ
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಭೆಗಳನ್ನು ಮಾಡಿ ನಾನು ಮುಖ್ಯಮಂತ್ರಿ ಆಗಬೇಕು ಎಂದು ಹೋರಟಿದ್ದಾರೆ. ಇದು ನಾಚೀಕೆಗೇಡಿನ ಸಂಗತಿಯಾಗಿದೆ. ನಾನು ಇದನ್ನು ಖಂಡಿಸುತ್ತೆನೆ ಇವರಿಗೆ ಜನರೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದ ರಸ್ತೆಗೆ ಬಂದ ಮರದ ದಿನ್ನೆಗಳ ರಾಶಿ- ಗ್ರಾಮಸ್ಥರಿಗೆ ತೊಂದರೆ
Advertisement
Advertisement
ಕರ್ನಾಟಕ ರಾಜ್ಯದ ಜನರಿಗೆ ದ್ರೋಹ,ವಂಚನೆ ಮಾಡುತ್ತಿದ್ದಾರೆ. ಬೆಡ್,ಆಕ್ಸಿಜನ್,ಔಷಧಿ, ಸಿಗದೆ ಸಾವಿರಾರು ಜನ ಸಾಯುತ್ತಿದ್ದಾರೆ. ಬಿಜೆಪಿಯರಿಗೆ ಮಾನ ಮರ್ಯಾದೆ ಇಲ್ಲಾ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ಆಕ್ರೋಶವ್ಯಕ್ತ ಪಡಿಸಿದ್ಧಾರೆ. ಇದನ್ನೂ ಓದಿ: 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
Advertisement
ಕೊರೊನಾದಿಂದಾಗಿ ಬೀದರ್ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಎರಡು ಸಾವಿರ ಜನ ಸಾವನ್ನಪ್ಪಿದ್ದಾರೆ. ಸಾವಿನ ಸುಳ್ಳು ಲೆಕ್ಕಾ ಸರ್ಕಾರ ಕೊಡುತ್ತಿರುವುದು ಖಂಡನೀಯವಾಗಿದ್ದು,ಸಾವಿನ ಬಗ್ಗೆ ಲೆಕ್ಕಪರಿಶೋಧನೆ ಆಗಬೇಕಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ಸರ್ಕಾರದ ವಿರುದ್ಧ ಬೀದರ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.