Connect with us

Latest

51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ

Published

on

Share this

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು 51ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಜನ್ಮದಿನದಂದು ದೇಶಾದ್ಯಂತ ಸೇವಾ ದಿವಸ್‍ಅನ್ನು ಕಾಂಗ್ರೆಸ್ ಆಚರಿಸುತ್ತಿದೆ.

ರಾಹುಲ್ ಗಾಂಧಿ ಹುಟ್ಟು ಹಬ್ಬದ ನಿಮಿತ್ತ ಕಾಂಗ್ರೆಸ್ ದೇಶಾದ್ಯಂತ ಸೇವಾ ದಿವಸ್‍ಅನ್ನು ಆಚರಿಸಿ ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್‍ಮಾಸ್ಕ್, ಮೆಡಿಸಿನ್ ಕಿಟ್, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಕಾಂಗ್ರೆಸ್ ನಿಂತಿದೆ. ಇನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಜತೆಗೆ ಅವರ ಅಗತ್ಯಗಳನ್ನು ಕೇಳಿ, ಪೂರೈಸುತ್ತಿದ್ದಾರೆ.

 

ಕಾಂಗ್ರೆಸ್ ನಾಯಕರಷ್ಟೇ ಅಲ್ಲದೆ ಎಲ್ಲ ಪಕ್ಷಗಳ ಕೆಲವು ಮುಖಂಡರೂ ಟ್ವಿಟರ್ ಮೂಲಕ ಶುಭಹಾರೈಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಇಲಾಖೆಯ ರಾಜ್ಯ ಸಚಿವ ಬಬುಲ್ ಸುಪ್ರಿಯೋ, ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತೇಜಸ್ವಿ ಯಾದವ್, ಶಶಿ ತರೂರ್ ಸೇರಿ ಹಲವು ನಾಯಕರು ರಾಹುಲ್ ಗಾಂಧಿ ಬರ್ತ್ ಡೇಗೆ ವಿಶ್ ಮಾಡಿ, ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಅದಷ್ಟೇ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರೂ ಸಹ ಟ್ವಿಟರ್​​ನಲ್ಲಿ ರಾಹುಲ್ ಗಾಂಧಿಯವರ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement