ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಕಳೆದಂತೆ ಸ್ಪರ್ಧಿಗಳಿಗೆ ಬಿಗ್‍ಬಾಸ್ ಮನೆಯ ಅಸಲಿ ಕತೆ ಒಂದೊಂದಾಗಿ ಗೊತ್ತಾಗುತ್ತಿದೆ. ಬಿಗ್‍ಮನೆಗೆ ಬರುವ ಮುಂಚೆ ಇದ್ದಂತಹ ಕುತೂಹಲಗಳು ಇದೀಗ ಒಂದೊಂದಾಗಿ ಅನುಭವವಾಗಿ ಮಾರುತ್ತಿದೆ. ಈ ಮಧ್ಯೆ ಬಿಗ್‍ಬಾಸ್ ಮನೆಯಲ್ಲಿ 55 ದಿನ ಕಳೆದು ಮುನ್ನುಗ್ಗುತ್ತಿರುವ ಮಂಜು ಪಾವಗಡ ಅವರು ಮನೆಯ ಪರಿಸ್ಥಿತಿ ಹಾಗೂ ತಮ್ಮ ಅಭಿಪ್ರಾಯಾಗಳನ್ನು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ಬಿಚ್ಚಿಟ್ಟಿದ್ದಾರೆ.
ಮಧ್ಯರಾತ್ರಿ ಎದ್ದು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತ ಮಂಜು, ಬಿಗ್‍ಬಾಸ್ ಎರಡು ದಿನಗಳಿಂದ ನೀವು ಕೊಟ್ಟ ಟಾಸ್ಕ್ ನಿಂದಾಗಿ ಕೆಲವರು ತುಂಬಾನೆ ಕಷ್ಟಪಡುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ನನಗೆ ಈಗ ಸರಿಯಾಗಿ ಅರ್ಥವಾಗುತ್ತಿದೆ. ನಾನು ಬಿಗ್ ಮನೆಗೆ ಬರುವ ಮುಂಚೆ ಇಲ್ಲಿ ಯಾಕೆ ಈರೀತಿ ಜಗಳವಾಡಿಕೊಂಡು ಇರುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ಇದೀಗ ನನಗೆ ಇದೆಲ್ಲ ಯಾಕೆ ಎಂದು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.
ಇಲ್ಲಿನ ಈಗಿನ ಸ್ಥಿತಿಯನ್ನು ಕಂಡು ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ನನಗೆ ವಾರನುಗಟ್ಟಲೆ ಸ್ನಾನ ಮಾಡದೆ ಎಲ್ಲ ಅಭ್ಯಾಸ ಇದೆ. ಆದರೆ ಇಲ್ಲಿರುವ ಕೆಲವು ಸ್ಪರ್ಧಿಗಳು ದೊಡ್ಡ ದೊಡ್ಡ ಮನೆತನದಿಂದ ಬಂದವರು ಅವರಿಗೆ ಒಂದು ದಿನ ಸ್ನಾನ ಮಾಡಿಲ್ಲ ಅಂದ್ರು ಆಗುವುದಿಲ್ಲ. ಹಾಗಾಗಿ ಅವರು ತುಂಬಾ ಕಷ್ಟಪಡುತ್ತಿದ್ದಾರೆ. ಆದರೆ ನನಗೆ ಇದೆಲ್ಲ ಅಭ್ಯಾಸ ಇದೆ ಹಲ್ಲು ಉಜ್ಜಿದರು ಆಗುತ್ತದೆ ಇಲ್ಲದಿದ್ದರು ಆಗುತ್ತದೆ. ಅವರೆಲ್ಲರು ಕೂಡ ಸ್ನಾನ ಮಾಡಿ ಫಫ್ರ್ಯೂಮ್ ಹಾಕುತ್ತಾರೆ. ನಾನು ಅವರಂತೆ ಇರುವುದಕ್ಕೋಸ್ಕರ ಹಾಕಿಕೊಳ್ಳುತ್ತಿದ್ದೇನೆ. ನಾನಂತು ಈ ದಿನಗಳನ್ನು ತುಂಬಾ ಖುಷಿಯಿಂದ ಕಳೆಯುತ್ತಿದ್ದೇನೆ ಅದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.
ಬಿಗ್‍ಮನೆಯಲ್ಲಿ ದಿನಗಳು ಕಳೆಯುತ್ತಿದೆ. ಅದರಂತೆ ಸ್ಪರ್ಧಿಗಳು ಕೂಡ ತಮ್ಮ ತಮ್ಮ ಆಟದಲ್ಲಿ ಹೆಚ್ಚಿನ ಗಮನವಿಟ್ಟುಕೊಂಡು ಮುಂದೆ ಹೋಗಳು ಬಯಸುತ್ತಿದ್ದಾರೆ. ಇದರೊಂದಿಗೆ ಸಣ್ಣ ಸಣ್ಣ ಜಗಳ, ಟಾಸ್ಕ್, ಜೋಡಿ ಹಕ್ಕಿಗಳ ಮಾತು, ಹರಟೆ ಹೀಗೆ ನೋಡುಗರಿಗೆ ಖುಷಿ ನೀಡುತ್ತಿದೆ.