ಬಿಗ್‍ಬಸ್ ಜರ್ನಿ ಎಂಡ್ ಆಗುತ್ತಿರುವುದರ ಕುರಿತಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ. ನೀವೆಲ್ಲಾ ವಿನ್ನರ್ ಆಗಿದ್ದೀರ. ನಿಮಗೆ ನನ್ನ ವಿಶ್ ಯಾವಾಗಲೂ ಇರುತ್ತದೆ ಎಂದು ಸಿದೀಪ್ ಕೆಲವು ಸಮಯ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಬೇಸರದಲ್ಲಿದ್ದ ಸ್ಪರ್ಧಿಗಳಿಗೆ ಕಿಚ್ಚ ಆವರ ಮಾತುಗಳು ಕೊಂಚ ಸಮಾಧಾನವನ್ನುಂಟು ಮಾಡಿದೆ.
ಬಿಗ್‍ಬಾಸ್ ಮನೆಯಿಂದ ಇನ್ನೇನು ಕೆಲವು ಗಂಟೆಯಲ್ಲಿ ಆಚೆ ಹೋಗುತ್ತವೆ ಎಂಬ ವಿಷಯವನ್ನು ತಿಳಿದ ಸ್ಪರ್ಧಿಗಳು ಕಣ್ಣೀರು ಹಾಕಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ತಮ್ಮ ಜರ್ನಿಯ ನೋವು, ನಲಿವಿನ ಕ್ಷಣಗಳಿರುವ ವೀಡಿಯೋವನ್ನು ನೋಡಿ ಸಂತೋಷದ ಜೊತೆಗೆ ಕಣ್ಣೀರುನ್ನು ಹಾಕಿದ್ದರು. ಕೊನೆಯಲ್ಲಿ ನಾನುವು ಸುದೀಪ್ ಸರ್ ಜೊತೆಗೆ ಮಾತನಾಡಬೇಕು ಎಂದು ಸ್ಪರ್ಧಿಗಳು ಕೇಳಿದ್ದಾರೆ. ಆಗ ಕಣ್ಮಣಿ ಕಿಚ್ಚಾ ಅವರ ಮಾತಿಲ್ಲದೆ ಈ ಕಾರ್ಯಕ್ರಮದ ಮುಗಿಯುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲಾರಿಗೂ ಈ ಕಿಚ್ಚನ ನಮಸ್ಕಾರಗಳು…ಕೆಲವು ವಾರಗಳ ದಿಂದ ನನಗೆ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ವಿಕೇಂಡ್‍ನಲ್ಲಿ ನಡೆಸಲು ಸಾಧ್ಯಗುತ್ತಿರಲಿಲ್ಲ. ಈ ಬಿಗ್‍ಬಾಸ್ ಜರ್ನಿ ನಿಮಗೆ ಒಳ್ಳೆಯದ್ದು ಮಾಡಲಿ. ಬಿಗ್‍ಬಾಸ್ ಅರ್ಧಕ್ಕೆ ಮುಗಿಯುತ್ತಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ. ನೀವೆಲ್ಲರೂ ಬಿಗ್‍ಬಾಸ್ ವಿನ್ನರ್ ಆಗಿದ್ದೀರಾ…. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ಸಮಾಧಾನದ ಕೆಲವು ಹೀತ ನುಡಿಗಳನ್ನು ಸುದೀಪ್ ಬೇಸರದಿಂದ ಸ್ಪರ್ಧಿಗಳಿಗೆ ಹೇಳಿದ್ದಾರೆ.
ಸುದೀಪ್ ಅವರ ಕೆಲವು ಮಾತುಗಳು ಸ್ಪರ್ಧಿಗಳಿಗೆ ಕೊಂಚ ಸಮಾಧಾನವನ್ನುಂಟು ಮಾಡಿದೆ. ಬಿಗ್‍ಬಾಸ್‍ನಲ್ಲಿ ಸ್ಪರ್ಧಿಗಳ ಜರ್ನಿ ಅಂತ್ಯವಾಗಿರಬಹುದು ಆದರೆ ಸಾಧನೆಯ ಹಾದಿ ಇನ್ನು ಇದೆ. ಬಿಗ್‍ಬಾಸ್ ನಂತರದ ಜೀವನ ಹೇಗಿರಲಿದೆ ಎನ್ನುವುದು ಸ್ಪರ್ಧಿಗಳ ಮುಂದೆ ಇರುವ ದೊಡ್ಡ ಪ್ರಶ್ನೆಯಾಗಿದೆ.