ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗಿ ದಿನಗಳು ಕಳೆಯುತ್ತಿರುವ ನಡುವೆ. ಮನೆಯಲ್ಲಿ ಇಬ್ಬರು ಸಂಬಂಧಿಕರ ನಡುವೆ ತಮ್ಮ ಕುಟುಂಬದ ಬಗ್ಗೆ ಸಣ್ಣಮಟ್ಟದ ಹೆಲ್ದಿ ವಾರ್ ನಡೆದಿದೆ.
ಬಿಗ್‍ಬಾಸ್ ನೀಡಿರುವ ಟಾಸ್ಕ್ ನಲ್ಲಿ ಕೂತು ಕಾಲ ಕಳೆಯುತ್ತಿರುವ 6 ಜನ ಸ್ಪರ್ಧಿಗಳಲ್ಲಿ ಇಬ್ಬರು ಸ್ಪರ್ಧಿಗಳು ನಿಜ ಜೀವನದಲ್ಲಿ ಸಂಬಂಧಿಕರಾಗಿದ್ದಾರೆ. ಮೊದಲ ಇನ್ನಿಂಗ್ಸ್ ಕೊರೊನಾದಿಂದಾಗಿ ನಿಂತ ಮೇಲೆ ಮನೆಗೆ ತೆರಳಿದ ಬಳಿಕ ಶಮಂತ್ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರಗಿ ಸಂಬಂಧಿಕರೆಂಬ ವಿಷಯ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ರಾಖಿ ಇಲ್ಲ ಮಂಜಣ್ಣ ಇದನ್ನೇ ಕಟ್ತೀನಿ: ವೈಷ್ಣವಿ
ಈ ವಿಷಯವಾಗಿ ಟಾಸ್ಕ್ ವೇಳೆ ಶಮಂತ್ ಗೌಡ, ಸಂಬಂಧಿಕರೆಲ್ಲ ಬಿಗ್‍ಮನೆಯ ಹೊರಗೆ ಮನೆಯ ಒಳಗಲ್ಲ ಎಂದು ಸಂಬರಗಿಗೆ ಹೇಳಿದ್ದಾರೆ. ಇದನ್ನು ಕೇಳಿದ ಮಂಜು ಯಾರು ಸಂಬಂಧಿಕರು ಎಂದು ಕೇಳಿದ್ದಾರೆ. ಇದಕ್ಕೆ ಚಕ್ರವರ್ತಿ, ಶಮಂತ್ ಮತ್ತು ಸಂಬರಗಿ ಅವರು ನಿಜವಾಗಿಯೂ ಸಂಬಂಧಿಕರು ಎಂದು ವಿವರಿಸಿದ್ದಾರೆ.
ನಿಮ್ಮಿಬ್ಬರ ಸಂಬಂಧ ಹೇಗೆ ಎಂದು ಶಮಂತ್ ಮತ್ತು ಚಕ್ರವರ್ತಿ ಬಳಿ ಕೇಳಿದ್ದಾರೆ. ಇದಕ್ಕೆ ಸಂಬರಗಿ ನಮ್ಮಿಬ್ಬರ ಕಡೆಯಿಂದ ಒಬ್ಬರ ಕುಟುಂಬಕ್ಕೆ ಒಬ್ಬರು ಗಂಡು, ಹೆಣ್ಣು ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಶಮಂತ್ ಒಂದು ಮದುವೆಯನ್ನು ಇಷ್ಟು ಕೇವಲವಾಗಿ ಮಾತನಾಡುತ್ತಾರಾ ಎಂದು ಸಂಬರಗಿ ಮೇಲೆ ಗರಂ ಆಗಿದ್ದಾರೆ.
ಇದನೆಲ್ಲ ಗಮನಿಸಿದ ಚಕ್ರವರ್ತಿ ನಿಮ್ಮ ಕುಟುಂಬ ವಿಷಯ ನೀವೆ ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಶಮಂತ್ ಹೆಲ್ದಿಯಾಗಿ ಕುಟುಂಬ ವಿಷಯವನ್ನು ಮನೆಯಿಂದ ಹೊರಗೆ ಹೋದ ಮೇಲೆ ಇಟ್ಟುಕೊಳ್ಳೋಣ ಎಂದು ಸುಮ್ಮನಾಗಿದ್ದಾರೆ.