ಬಿಎಸ್‍ವೈ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು: ಸಿದ್ದರಾಮಯ್ಯ

Public TV
2 Min Read
Siddaramaiah 1

– ಏಪ್ರಿಲ್ ನಲ್ಲಿ ಸಿಎಂ ಬದಲಾಗ್ತಾರೆ
– ಸಿಡಿ ಕುರಿತು ತನಿಖೆಗೆ ಒತ್ತಾಯ

ಮೈಸೂರು: ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು. ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ. ಸಿಡಿ ಕುರಿತು ತನಿಖೆ ಆಗಲಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

mys cm bsy

ಸಿಎಂ ವಿರುದ್ಧ ಸಿಡಿ ಬ್ಲಾಕ್‍ಮೇಲ್ ವಿಚಾರವಾಗಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನ್ ಮಾಡಿದ್ದಾನೋ ಯಾರಿಗ್ ಗೊತ್ತು.? ಅಸಹ್ಯವಾಗಿ ಬೇರೆ ಇದೆಯಂತೆ. ಸಿಡಿಲಿ ಏನೇನ್ ಮಾದ್ದಾರೆ ಅನ್ನೋದು ಬಹಿರಂಗವಾಗಲಿ. ಈ ಕುರಿತಾಗಿ ಜನತೆಗೆ ತಿಳಿಯಬೇಕು. ಎಲ್ಲವೂ ಗೊತ್ತಾಗಬೇಕು ಎಂದರೆ ತನಿಖೆಯಾಗಬೇಕು ಎಂದು ಯಡಿಯೂರಪ್ಪ ಸಿಡಿ ವಿಚಾರವಾಗಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

SIDDARAMAIAH 1 1

ಏಪ್ರಿಲ್ ಬಳಿಕ ಯಡಿಯೂರಪ್ಪ ತೆಗೆಯುತ್ತಾರೆ ಎಂದು ನನನಗೆ ಆರ್.ಎಸ್.ಎಸ್ ಮೂಲಗಳಿಂದ ಮಾಹಿತಿ ಬಂದಿದೆ. ಯಡಿಯೂರಪ್ಪ ಮುಂದುವರೆಯುತ್ತಾರೆ ಎಂಬ ಅಮಿತ್ ಶಾ ಹೇಳಿದ್ದಾರೆ. ಹೈಕಮಾಂಡ್ ಬಿಎಸ್‍ವೈನ ತೆಗೆಯುತ್ತೇನೆ ಎಂದು ಹೇಳಿದರೆ ಸರ್ಕಾರ ನೆಡೆಸೋಕೆ ಆಗುತ್ತಾ? ಕೆಲಸ ಮಾಡೋಕಾಗುತ್ತಾ? ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಆದ ಮೇಲೆ ತೆಗೆಯುತ್ತಾರೆ ಎಂದು ಮಾಹಿತಿ ಇದೆ ಎಂದರು.

SIDDARAMAIAHಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಸೇರಿ ಚುನಾವಣೆ ನಡೆಸಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಶೇ70 ರಷ್ಟು ಬೆಂಬಲಿತರು ಗೆದ್ದಿದ್ದಾರೆ. ಈ ಹಿನ್ನೆಲೆ ನನಗೆ ಧನ್ಯವಾದ ಹೇಳೋಕೆ ಶರತ್ ಬಚ್ಚೆ ಗೌಡ ಬಂದಿದ್ದರು. ಶರತ್ ಬಚ್ಚೆಗೌಡ ಪಕ್ಷಕ್ಕೆ ಬರೋ ಬಗ್ಗೆ ಮಾತುಕತೆ ನಡಯುತ್ತಿದೆ. ಇನ್ನು 15 ದಿನದಲ್ಲಿ ಎಲ್ಲವೂ ತೀರ್ಮಾನವಾಗುತ್ತೆ ಎಂದು ಹೇಳಿದ್ದಾರೆ.

CM BSY

ಬಿಎಸ್‍ವೈ ಸರ್ಕಾರ ರಚನೆಗೆ ಕ್ಯಾಬಿನೆಟ್ ಸಚಿವರೇ 9 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಅಂತ ಹೇಳಿದ್ದಾರೆ. ಯೋಗೇಶ್ವರ್ ಆ ದುಡ್ಡು ಎಲ್ಲಿಂದ ತಂದಿದ್ದಾರೆ. ಯಾರ ಬಳಿ ಸಾಲ ಮಾಡಿದ್ದಾರೆ. ಹಣವನ್ನು ಯಾರಿಗೆ ನೀಡಿದ್ದಾರೆ ಎಂದು ತನಿಖೆ ಮಾಡಲಿ ಎಂದಿದ್ದಾರೆ.

siddaramaiah 1
ಕುರುಬರು ಈಗಾಗಲೇ ಬಲ ಪ್ರದರ್ಶನ ಮಾಡಿ ತೋರಿಸಾಗಿದೆ. ಈಗ ಬಲಪ್ರದರ್ಶನ ಮಾಡಿದರೆ ಇವರು ಎಸ್‍ಟಿ ಮೀಸಲಾತಿ ಕೊಡ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನಾನು ಬೇಡ ಎಂದರೂ ಪಾದಯಾತ್ರೆ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *