ಬೆಂಗಳೂರು: ವಿಶ್ವದೆಲ್ಲೆಡೆ ಇಂದು ಏಳನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಂತೆ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ(ಬಿಇಎಲ್) ನ ಸಿಬ್ಬಂದಿ, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ಮಾಡಿದ್ರು.
ಬಿ.ಇ.ಎಲ್ ನಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು, ಎಲ್ಲಾ ಘಟಕಗಳ ಸಿಬ್ಬಂದಿ ಹಾಗೂ ಕುಟುಂಬ ವರ್ಗದ ಸಾವಿರಾರು ಜನ ಸೇರಿ ಆನ್‍ಲೈನ್ ಮುಖಾಂತರ ಏಕಕಾಲಕ್ಕೆ ಸೇರಿ ಯೋಗ ಆಚರಿಸಿದರು. ವಿವಿಧ ಆಸನಗಳನ್ನು ಮಾಡಿದರು.
ಈ ಬಗ್ಗೆ ಬಿಇಎಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ್, ಪ್ರಾಣಾಯಾಮದಿಂದ ಆರೋಗ್ಯಕರ ಬದುಕನ್ನು ಸಾಗಿಸಬಹುದು ಎಂದರು. ಬೆಂಗಳೂರು ಸಂಕೀರ್ಣದ ನಿರ್ದೇಶಕರಾದ ವಿನಯ ಕುಮಾರ್ ಕತ್ಯಾಲ್, ಮಾನವ ಸಂಪನ್ಮೂಲ ನಿರ್ದೇಶಕರಾದ ಕೆ.ಎಂ ಶಿವಕುಮಾರನ್, ಪ್ರಧಾನ ವ್ಯವಸ್ಥಾಪಕರಾದ ಆರ್.ಪಿ ಮೋಹನ್ ಹಾಗೂ ಸಂಸ್ಥೆಯು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಬಿಇಎಲ್ ಸಂಸ್ಥೆಯಿಂದ ಕೊರೊನಾ ಪೀಡಿತರಿಗೆ ಯೋಗ ಥೆರಪಿಯನ್ನು ನಿರಂತರವಾಗಿ ನೀಡಲಾಗುತ್ತಿದೆ.