ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಾಲ್ಯ ಸ್ನೇಹಿತ ಎಸ್.ಎ.ಕೋತ್ವಾಲ್ ನಿಧನರಾಗಿದ್ದು, ಈ ಹಿನ್ನೆಲೆ ಬಾಲ್ಯ ಸ್ನೇಹಿತನನ್ನು ನೆನೆದು ರಮೇಶ್ ಜರಕಿಹೊಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತ ಎಸ್.ಎ.ಕೋತ್ವಾಲ್ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದು, ಗೋಕಾಕ್‍ಗೆ ಮೃತದೇಹ ಆಗಮಿಸುತ್ತಿದ್ದಂತೆ ಸಾಹುಕಾರ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಅಶೋಕ್ ಪೂಜಾರಿ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರೂ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದು, ಈ ವೇಳೆ ಜಾರಕಿಹೊಳಿ ಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮೃತ ಎಸ್.ಎ.ಕೋತ್ವಾಲ್, ರಮೇಶ್ ಜಾರಕಿಹೊಳಿ ಹಾಗೂ ಅಶೋಕ್ ಪೂಜಾರಿ ಬಾಲ್ಯ ಸ್ನೇಹಿತರು. ಕಣ್ಣ ಮುಂದೆಯೇ ಬಾಲ್ಯ ಸ್ನೇಹಿತ ಮಲಗಿರುವುದನ್ನು ಕಂಡು, ಆತನನ್ನು ನೆನೆದು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಲಗೈ ಬಂಟನಂತಿದ್ದ ಸ್ನೇಹಿತನನ್ನು ಕಳೆದುಕೊಂಡ ರಮೇಶ್ ಜಾರಕಿಹೊಳಿ ಭಾವುಕರಾಗಿದ್ದಾರೆ.