ಚೆನ್ನೈ: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದು, ಇಡೀ ಕುಟುಂಬದವರು ದುಃಖದಲ್ಲಿದ್ದಾರೆ. ಅಣ್ಣನ ಅಗಲಿಕೆಯ ಐದು ದಿನಗಳ ನಂತರ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ನಟಿ ಐಶ್ವರ್ಯಾ ಅರ್ಜುನ್ ಚಿರಂಜೀವಿಯನ್ನು ನೆನೆದು ಭಾವುಕರಾಗಿದ್ದಾರೆ.
ನಟ ಅರ್ಜುನ್ ಅವರ ಪುತ್ರಿ ಐಶ್ವರ್ಯಾ ಇನ್‍ಸ್ಟಾಗ್ರಾಂನಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗಿನ ಬಾಲ್ಯದ ಫೋಟೋವನ್ನು ಹಾಕುವ ಮೂಲಕ ಕಂಬನಿ ಮಿಡಿದಿದ್ದಾರೆ. ಸರ್ಜಾ ಕುಟುಂಬದ ಮಕ್ಕಳೆಲ್ಲರು ಒಟ್ಟಿಗೆ ಬೆಳೆದವರು. ಅರ್ಜುನ್ ಸರ್ಜಾ ಅವರ ಸಹೋದರಿ ಅಮ್ಮಾಜಿ ಅವರ ಮಕ್ಕಳಾದ ಚಿರು, ಧ್ರುವ, ಕಿಶೋರ್ ಸರ್ಜಾ, ಅರ್ಜುನ್ ಪುತ್ರಿಯರಾದ ಐಶ್ವರ್ಯಾ ಮತ್ತು ಅಂಜನಾ ಹೀಗೆ ಎಲ್ಲರು ಒಟ್ಟಿಗೆ ಆಡಿಕೊಂಡು ಬೆಳೆದವರು.
ಇದೀಗ ಇಡೀ ಕುಟುಂಬ ಚಿರು ಅವರನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ. ಹೀಗಾಗಿ ಬಾಲ್ಯದಲ್ಲಿ ಚಿರು ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಐಶ್ವರ್ಯಾ, ತಮ್ಮ ಇನ್‍ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಚಿರು, ಧ್ರುವ, ಐಶ್ವರ್ಯಾ, ಅವರ ಸಹೋದರಿ ಅಂಜನಾ, ಸೂರಜ್ ಇದ್ದಾರೆ. ಈ ಫೋಟೋಗೆ ‘ಚಿರಂಜೀವಿ’ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ ಕ್ಯಾಪ್ಶನ್ ಕೊಟ್ಟಿದ್ದಾರೆ.
ನಟಿ ಐಶ್ವರ್ಯಾ ಅಭಿನಯಿಸಿರುವ ‘ಪ್ರೇಮ ಬರಹ’ ಸಿನಿಮಾದ ಹಾಡೋಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ, ಚಿರಂಜೀವಿ ಜೊತೆಗೆ ಅರ್ಜುನ್ ಸರ್ಜಾ ಕೂಡ ಮಿಂಚಿದ್ದರು. ಈ ಮೂಲಕ ಐಶ್ವರ್ಯಾ ನಟನೆಯ ಕನ್ನಡ ಸಿನಿಮಾಕ್ಕೆ ಚಿರು ಸಾಥ್ ನೀಡಿದ್ದರು.
https://www.instagram.com/p/CBVOUWtJF34/?igshid=1mg3oio32tqnq
ಅಣ್ಣನನ್ನು ಕಳೆದುಕೊಂಡು ಐದು ದಿನಗಳ ಬಳಿಕ ಧ್ರುವ ಸರ್ಜಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಚಿರಂಜೀವಿ ಸರ್ಜಾ ಸಾವಿಗೂ ಒಂದು ದಿನ ಮುನ್ನ ಶೇರ್ ಮಾಡಿಕೊಂಡಿದ್ದ ಫೋಟೋ ನೋಡಿ ನೋವನ್ನು ತೋಡಿಕೊಂಡಿದ್ದರು. ‘ನೀನು ನನಗೆ ವಾಪಸ್ ಬೇಕು. ನೀ ಇರದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ’ ಎಂದು ಧ್ರುವ ಸರ್ಜಾ ನೋವಿನ ನುಡಿಗಳನ್ನು ಸ್ಟೇಟಸ್‍ನಲ್ಲಿ ಬರೆದುಕೊಂಡಿದ್ದರು.