ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಧಿಸಿದಂತೆ ಸಂತ್ರಸ್ತ ಯುವತಿ ಪರ ವಕೀಲರ ಆಪ್ತ ಲಾಯರ್ ನನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.
ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಆಪ್ತ ಮಂಜುನಾಥ್ ಅವರೇ ಅಮಾನತಾದ ವಕೀಲ. ಬಾರ್ ಕೌನ್ಸಿಲ್ ವಿರುದ್ಧ ಮಂಜುನಾಥ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಅವರನ್ನು ವಜಾ ಮಾಡಲಾಗಿದೆ.
Advertisement
Advertisement
ಬಾರ್ ಕೌನ್ಸಿಲ್ ಫೆಲ್‍ಫೇರ್ ಸ್ಟ್ಯಾಂಪ್ ಬಗ್ಗೆ ಮಂಜುನಾಥ್ ಆರೋಪ ಮಾಡಿದ್ದರು. ಹೀಗಾಗಿ ಮಂಜುನಾಥ್ ವಿರುದ್ಧ ವಿಚಾರಣೆಗೆ ತೀರ್ಮಾನ ಮಾಡಲಾಗಿದ್ದು, ವಿಚಾರಣೆ ಮುಗಿಯುವವರೆಗೆ ವಕಾಲತ್ತು ವಹಿಸುವಂತಿಲ್ಲ. ಹೀಗಂತ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‍ನಿಂದ ಮಂಜುನಾಥ್ ಅವರಿಗೆ ನೋಟಿಸ್ ನೀಡಿದೆ.
Advertisement
ಸಿಡಿ ಯುವತಿ ಪರ ವಕೀಲ ಜಗದೀಶ್ ಹಾಗೂ ಮಂಜುನಾಥ್ ಬಾರ್ ಕೌನ್ಸಿಲ್‍ಗೆ ಸವಾಲೆಸೆದಿದ್ದರು. ತಾಕತ್ತಿದ್ದರೆ ಕ್ರಮಕೈಗೊಳ್ಳಿ ಎಂದು ಚಾಲೆಂಜ್ ಹಾಕಿದ್ದರು. ಜಗದೀಶ್ ದೆಹಲಿ ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಹಿನ್ನೆಲೆಯಲ್ಲಿ ಜಗದೀಶ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.