– ಬಾಯ್ಲರ್ ಅನಾಹುತ ತಡೆಯಲು ಮೊದಲ ಆದ್ಯತೆ
ಬೆಂಗಳೂರು: ಬಾಯ್ಲರ್ ಡಿಪಾರ್ಟ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಇದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ ಹಾಗೂ ಜಾಲಹಳ್ಳಿಯ ಬಿಇಎಲ್ ನೇತೃತ್ವದಲ್ಲಿ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕ್ಯಾಂಪಸ್‍ನ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ 50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಐದು ತಿಂಗಳ ಕಾಲ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಬಡತನ, ಕಾರ್ಮಿಕರ ಶ್ರಮವನ್ನು ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
Advertisement
Advertisement
ಟೊಯೋಟಾ ಕಾರ್ಮಿಕರ ಸಮಸ್ಯೆಗೆ ನಿನ್ನೆ ತಾರ್ಕಿಕ ಅಂತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸೌಖ್ಯತೆಯನ್ನು ಮಾಡಬೇಕಿದೆ. ಮಕ್ಕಳ ಪಾಲನೆ, ಪೋಷಣೆ ಬೇರೆಯವರ ಜವಬ್ದಾರಿ ಎಂದುಕೊಳ್ಳಲಾಗಿದೆ. ಬಾಯ್ಲರ್ ಡಿಪಾಟ್ರ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಕಾರ್ಮಿಕರಿಗೆ ಅನುಕೂಲವಾಗುವ ಹೊಸ ಹೊಸ ಕಾನೂನುಗಳನ್ನು ತಂದಿದ್ದೇವೆ. ಕಾರ್ಮಿಕ ಬದ್ಧತೆ ಹಾಗೂ ರಕ್ಷಣೆ ಮಾಲೀಕರ ಜವಾಬ್ದಾರಿ ಎಂದು ತಿಳಿಸಿದರು.
Advertisement
ಕಾಂಟ್ರಾಕ್ಟ್ ಬೇಸ್ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು. ಇಡೀ ದೇಶದಲ್ಲೇ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಅಪಘಾತಗಳ ಸಂಖ್ಯೆ ಕಡಿಮೆಯಾದಾಗ ಈ ಸಮಾರಂಭ ಔಚಿತ್ಯಪೂರ್ಣವಾಗುತ್ತದೆ. ಕಾರ್ಮಿಕರಿಗೆ ಉದ್ಯೋಗ ಸಿಗಬೇಕು ಎಂದರು. ಈ ವೇಳೆ ರಸ್ತೆ ಸುರಕ್ಷತಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
Advertisement
ಬಿಇಎಲ್ ಡೆಪ್ಯುಟಿ ಮ್ಯಾನೇಜರ್ ಗುರುರಾಜ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಈ ವೇಳೆ ಬಿಇಎಲ್ ಕಾರ್ಖಾನೆಯ ಘಟಕ ಮುಖ್ಯಸ್ಥರಾದ ಆರ್.ಪಿ.ಮೋಹನ್, ಸನ್ ಸೇರ ಇಂಜಿನಿಯರಿಂಗ್ ಲಿಮಿಟೆಡ್ ನ ಎಂಡಿ ಎಫ್.ಆರ್.ಸಿಂಘ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.