ಬೆಂಗಳೂರು: ಕೊರೊನಾ ವೈರಸ್ ನಡುವೆ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ದೊರೆತಿದೆ. ಅದೇನೆಂದರೆ ಇಂದಿನಿಂದ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಫ್ ರೂಲ್ಸ್ ಇಲ್ಲ.
ಹೌದು, ಬಸ್‍ಗಳಲ್ಲಿ ಪೂರ್ಣ ಪ್ರಮಾಣದ ಆಸನದಲ್ಲಿ ಪ್ರಯಾಣಿಕರು ಇನ್ಮುಂದೆ ಪ್ರಯಾಣಿಸಬಹುದಾಗಿದೆ. ಕೆಎಸ್‍ಆರ್‍ಟಿಸಿ, ವಾಯುವ್ಯ ನಿಗಮ, ಈಶಾನ್ಯ ನಿಗಮದ ಪ್ರಯಾಣಿಕರಿಗೆ ಇನ್ಮುಂದೆ ಯಾವುದೇ ಕಂಡಿಷನ್ ಇಲ್ಲ. ಕೊರೊನಾ ಕೇಸ್‍ನಿಂದಾಗಿ ಲಾಕ್‍ಡೌನ್ ಆಗಿ ಸುಮಾರು 2 ತಿಂಗಳು ಬಸ್ ಸಂಚಾರ ಸ್ಥಗಿತಗೊಂಡಿತ್ತು.
Advertisement
Advertisement
ಲಾಕ್‍ಡೌನ್ ಸಡಿಲಿಕೆ ನಂತರ ಮತ್ತೆ ಬಸ್ಸುಗಳು ರಸ್ತೆಗಿಳಿಯಿತು. ಆದರೆ ಹಲವು ರೂಲ್ಸ್‍ಗಳು, ಗೈಡ್‍ಲೈನ್ಸ್‍ಗಳನ್ನ ಬಿಡಲಾಗಿತ್ತು. ಅದರಂತೆ ಇದೂವರೆಗೆ ಒಂದು ಸೀಟು ಬಿಟ್ಟು ಇನ್ನೊಂದು ಸೀಟ್ ನಲ್ಲಿ ಪ್ರಯಾಣಕ್ಕೆ ಅವಕಾಶ ವಿತ್ತು. ಆದರೆ ಇನ್ನುಮುಂದೆ ಈ ರೂಲ್ಸ್ ಇರಲ್ಲ. ಅಕ್ಕಪಕ್ಕದೇ ಕುಳಿತು ಪ್ರಯಾಣ ಮಾಡಬಹುದು. ಪೂರ್ಣ ಪ್ರಮಾಣದ ಸೀಟು ಭರ್ತಿಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
Advertisement
Advertisement
ಅಲ್ಲದೆ ಬಸ್ಸಿನಲ್ಲಿ ಸಾಮಾಜಿಕ ಅಂತರಕ್ಕೆ ಸರ್ಕಾರದ ತಿಲಾಂಜಲಿ ಹಾಕಲಾಗಿದೆ. ಪ್ರಯಾಣಿಕರು, ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಬಸ್ಸಿನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸುವಂತಿಲ್ಲ. ನಿರ್ದಿಷ್ಟ ಪ್ರಯಾಣದ ಬಳಿಕ ಬಸ್‍ಗಳಿಗೆ ಸ್ಯಾನಿಟೈಸ್ ಕಡ್ಡಾಯ ಮಾಡಲಾಗಿದೆ.