ಲಾಹೋರ್: ಪಾಕಿಸ್ತಾನದ ಮಹಿಳೆಯೊಬ್ಬರು ತನ್ನ ಬರ್ತ್ಡೇ ಪಾರ್ಟಿಯಲ್ಲಿ ಸಿಂಹವನ್ನು ಮನರಂಜನಾ ವಸ್ತುವನ್ನಾಗಿ ಬಳಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- Advertisement 2
ಸುಸಾನ್ ಖಾನ್ ಲಾಹೋರ್ನಲ್ಲಿ ತನ್ನ ಬರ್ತ್ಡೇ ಪಾರ್ಟಿಯನ್ನು ಆಯೋಜಿಸಿದ್ದಳು. ಈ ವೇಳೆ ಸಿಂಹವೊಂದನ್ನು ಕಬ್ಬಿಣ ಚೈನ್ ಮೂಲಕ ಬಂಧಿಸಲ್ಪಟ್ಟಿದ್ದು, ಅದರ ಸುತ್ತಮುತ್ತಾ ಜನ ಸಾಂಗ್ ಪ್ಲೇ ಮಾಡಿಕೊಂಡು ಪಾರ್ಟಿ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
- Advertisement 3
- Advertisement 4
ಈ ವೀಡಿಯೋವನ್ನು ಪ್ರಾಜೆಕ್ಟ್ ಸೇವ್ ಅನಿಮಲ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪೀಠೋಕರಣದ ಮೇಲೆ ಸಿಂಹ ಮಲಗಿಕೊಂಡು ಅದರ ಕತ್ತಿನ ಸುತ್ತ ಕಬ್ಬಿಣದ ಸರಪಳಿ ಕಟ್ಟಲಾಗಿದೆ. ಅಲ್ಲದೇ ಈ ಸಿಂಹವನ್ನು ಸುಸಾನ್ ಖಾನ್ ತಮ್ಮ ಮನೆಯಲ್ಲಿಯೇ ಸಾಕಿದ್ದಾಳೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎಲ್ಇಟಿ ಕಮಾಂಡರ್, ಇಬ್ಬರು ಉಗ್ರರ ಎನ್ಕೌಂಟರ್
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಾಣಿಗಳು ನಮ್ಮತೆಯೇ ಜೀವಿಗಳು, ಅವುಗಳನ್ನು ಕಟ್ಟು ಹಾಕುವುದು ಸರಿಯಲ್ಲ. ನಿಮ್ಮ ಪ್ರತಿಷ್ಠೆಗಾಗಿ ಪ್ರಾಣಿಗಳನ್ನು ಸಾಕಿ. ಜನಸಂದಣಿಯ ಗದ್ದಲದ ನಡುವೆ ಅವುಗಳಿಗೆ ಹಿಂಸೆಯಾಗುತ್ತದೆ ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
View this post on Instagram