ಮುಂಬೈ: ಮಹಾರಷ್ಟ್ರದ ಪಾಲಗಢದ ಆರು ವರ್ಷದ ಬಾಲಕಿ ತನ್ನ ಜನ್ಮದಿನಾಚರಣೆಯನ್ನು ಆಚರಿಸದಿರಲು ನಿರ್ಧರಿಸಿ, ಕೊರೊನಾ ಬಿಕ್ಕಟ್ಟಿನ ನಡುವೆ ರಕ್ತದಾನ ಮಾಡುವಂತೆ ಮನವಿ ಮಾ ಸುದ್ದಿಯಾಗಿದ್ದಾಳೆ.
ಮಹಾರಾಷ್ಟ್ರದ ಪಾಲಗಢ ಜಿಲ್ಲೆಯ ವಾಡಾ ತಾಲ್ಲೂಕಿನ ಗಂಡ್ರೆ ಗ್ರಾಮದ ನಿವಾಸಿಯಾಗಿರುವ ಯುಗ ಅಮೋಲ್ ಠಾಕ್ರೆ ಎಂಬ ಬಾಲಕಿಗೆ ಶನಿವಾರ 6 ವರ್ಷ ತುಂಬಿದೆ. ಮಾಧ್ಯಮವೊಂದರಲ್ಲಿ ರಕ್ತದಾನ ಮಾಡುವಂತೆ ಮನವಿ ಮಾಡಿರುವುದನ್ನು ನೋಡಿದ ಬಾಲಕಿ ತನ್ನ ಕುಟುಂಬಸ್ಥರಿಗೆ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸದಂತೆ ಹಾಗೂ ಉಡುಗೊರೆ ನೀಡದಂತೆ ಕೇಳಿಕೊಂಡಿದ್ದಾಳೆ. ಬಳಿಕ ಅಂದು ರಕ್ತದಾನ ಮಾಡಿ ಎಂದು ಕೇಳಿಕೊಂಡಿದ್ದಾಳೆ.
ಬಾಲಕಿ ಮನವಿಗೆ ಸ್ಪಂದಿಸಿದ ಕುಟುಂಬ ಸದಸ್ಯರು ಮತ್ತು ಸಂಬಂಧಿಗಳು, ಸ್ನೇಹಿತರು ಸೇರಿದಂತೆ 36 ಮಂದಿ ಶನಿವಾರ ಕಲ್ಯಾಣಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದಾರೆ.
ಈ ಕುರಿತಂತೆ ಡಾ. ವೈಭವ್ ಠಾಕ್ರೆ, ಇದು ನಿಜವಾಗಿಯೂ ಉತ್ತಮವಾದ ಆಲೋಚನೆಯಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಗುವಿನ ಕಾರ್ಯ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ದಾನ ಮಾಡಿದ ರಕ್ತವನ್ನು ನೆರೆಯ ಥಾಣೆಯಲ್ಲಿರುವ ವಾಮನ್‍ರಾಕ್ ಓಕ್ ಬ್ಲಡ್ ಬ್ಯಾಂಕ್‍ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.