– ಮಗನನ್ನ ಬಂಗಾರದ ಹಾಗೆ ಬೆಳೆಸಿದ್ದೇನೆ
– ಇರೋ ಸೈಟ್ ಮಾರಿ ಓದಿಸಿದ್ದೇನೆ
ಬೀದರ್: ಮಾಜಿ ಸಚಿವರ ಸಿಡಿಯಲ್ಲಿರುವ ಯುವತಿಯ ಗೆಳೆಯ ಎನ್ನಲಾದ ಯುವಕನನ್ನ ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಯುವಕನ ತಾಯಿ, ಮಗನನ್ನ ಚಿನ್ನದ ಹಾಗೆ ಬೆಳೆಸಿದ್ದೇನೆ. ದಿಢೀರ್ ಅಂತ ಬಂದವರು ನನ್ನ ಗಮನಕ್ಕೂ ತರದೇ ಪುತ್ರನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
ಪುತ್ರ ಆರು ವರ್ಷದವನಿದ್ದಾಗ ಆತ ತಂದೆ ಸಾವನ್ನಪ್ಪಿದರು. ಬಡತನದಲ್ಲಿಯೇ ಮಗನನ್ನ ಚೆನ್ನಾಗಿ ಓದಿಸಿದ್ದೇನೆ. ಒಂದು ನಿವೇಶನ ಮಾರಾಟ ಮಾಡಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿಸಿದ್ದೇನೆ. ಓದು ಮುಗಿದ ನಂತರ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗಿತ್ತು. ಯುವತಿ ಮಗ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಅನ್ನೋದು ಗೊತ್ತು ಎಂದರು. ಇದನ್ನೂ ಓದಿ: ರಾತ್ರಿ ಮನೆಗೆ ಬಂದು ಪತಿಯ ಮಾಹಿತಿ ಕೇಳಿದ್ರು: ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ
ನಿನ್ನೆ ಕರೆ ಮಾಡಿದ ಮಗ ತಾನು ಚೆನ್ನಾಗಿದ್ದೇನೆ. ಭಯ ಪಡಬೇಡ ಎಂದು ಹೇಳಿದ್ದಾನೆ. ಆದ್ರೆ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ನನಗೆ ಅಥವಾ ಊರಿನವರಿಗೆ ವಿಷಯ ತಿಳಿಸಬೇಕಿತ್ತು ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಡಿ ಕೇಸ್‍ನಲ್ಲಿ ಎಂಟ್ರಿಯಾಯ್ತು ಮಹಿಳಾ ಆಯೋಗ – ಸ್ವಯಂ ಪ್ರೇರಿತ ದೂರು ದಾಖಲು