– ಮೀನುಗಾರರಿಗೆ ಎಚ್ಚರಿಗೆ
ಉಡುಪಿ: ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತ ಅರಬ್ಬೀ ಸಮುದ್ರ ತೀರದಲ್ಲಿ ಮಳೆ ತರುತ್ತಿದೆ. ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಗಂಟೆಗೆ 45ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
Advertisement
ಚಂಡಮಾರುತದಿಂದಾಗಿ ಭಾರೀ ವೇಗವಾಗಿ ಗಾಳಿ ಬೀಸುತ್ತಿದ್ದು, ಮಳೆ ಸಹ ನಿರಂತರವಾಗಿ ಬೀಳುತ್ತಿದೆ. ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತ ಅರಬ್ಬಿ ಕಡಲತೀರದಲ್ಲಿ ವರ್ಷ ಧಾರೆಯನ್ನು ತರಿಸುತ್ತಿದೆ. ಕಾರ್ಕಳ, ಕುಂದಾಪುರ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
Advertisement
Advertisement
ಸೋಮವಾರ ರಾತ್ರಿಯಿಂದಲೇ ಹಲವೆಡೆ ಧಾರಾಕಾರ ಮಳೆ ಶುರುವಾಗಿದೆ. ಕಳೆದ ರಾತ್ರಿಯೂ ನಿರಂತರ ಮಳೆ ಬಿದ್ದಿದೆ. ನಾಡದೋಣಿ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು, ಆಳಸಮುದ್ರ ಮೀನುಗಾರರು ಬಹಳ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶ ರವಾನಿಸಲಾಗಿದೆ.