ಹೈದರಾಬಾದ್: ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ವಿವಾದಾತ್ಮಕ ಹೇಳಿಕೆಗಳು ಹಾಗೂ ಸಿನಿಮಾ ಮೂಲಕವೇ ಸಾಕಷ್ಟು ಚರ್ಚೆಯಾಗುತ್ತಾರೆ. ಇತ್ತೀಚೆಗೆ ತಮ್ಮ ಮುಂದಿನ ‘ಪವರ್ ಸ್ಟಾರ್’ ಸಿನಿಮಾದ ಟ್ರೇಲರ್ ಗೆ 25 ರೂ. ರೇಟ್ ಫಿಕ್ಸ್ ಮಾಡಿ ಸುದ್ದಿಯಾಗಿದ್ದರು. ಸದ್ಯ ಆರ್ಜಿವಿ ಅವರ ಪ್ಲಾನ್ ಉಲ್ಟಾ ಆಗಿದ್ದು, ಟ್ರೇಲರ್ ಲೀಕ್ ಆಗಿದೆ.
ಜುಲೈ 22ರ ಬೆಳಗ್ಗೆ 11 ಗಂಟೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಆರ್ಜಿವಿ ಈ ಹಿಂದೆ ಹೇಳಿದ್ದರು. ಅಲ್ಲದೇ ಸಿನಿಮಾದ ಟ್ರೇಲರಿಗೆ ಹಣ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಟ್ರೇಲರ್ ಲೀಕ್ ಆಗಿದೆ. ಆರ್ಜಿವಿ ಅವರೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ಟ್ರೇಲರ್ ಲೀಕ್ ಮಾಡಿದ್ದಾರೆ ಎನ್ನಲಾಗಿದೆ.
— Ram Gopal Varma (@RGVzoomin) July 22, 2020
ವಿಶ್ವದ ಮೊದಲ ಪೈಡ್ ಟ್ರೇಲರ್ ಎಂದೇ ಸಾಕಷ್ಟು ಪ್ರಚಾರ ಪಡೆದಿದ್ದಆರ್ಜಿವಿ ಅವರ ಪ್ಲಾನ್ ಸದ್ಯ ತಲೆಕೆಳಗಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಆರ್ಜಿವಿ, ಇಂದು 11 ಗಂಟೆಗೆ ಬಿಡುಗಡೆಯಾಗಬೇಕಿದ್ದ ಟ್ರೇಲರ್ ಲೀಕ್ ಆಗಿದೆ. ಸ್ವತಃ ನನ್ನೊಂದಿಗೆ ಕೆಲಸ ಮಾಡುವ ಸಿಬ್ಬಂದಿಯೇ ಇದನ್ನು ಮಾಡಿದ್ದಾರೆ ಎಂಬ ಅನುಮಾನವಿದೆ. ಟ್ರೇಲರ್ ಗಾಗಿ ಮುಂಗಡ ಬುಕ್ ಮಾಡಿಕೊಂಡಿದ್ದ ಎಲ್ಲರ ಹಣವನ್ನು ಶೀಘ್ರವೇ ಹಿಂದಿರುಗಿಸುತ್ತೇನೆ. ಅಧಿಕೃತವಾಗಿ ನನ್ನ ಯೂಟ್ಯೂಬ್ನಲ್ಲಿ ಸಿನಿಮಾ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇತ್ತ ಆರ್ಜಿವಿ ಅವರು ಟ್ವೀಟ್ ಮಾಡುತ್ತಿದಂತೆ ಸಾಕಷ್ಟು ಮಂದಿ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಯಾರು ಹಣ ನೀಡಿ ಟ್ರೈಲರ್ ನೋಡಲು ಬುಕ್ ಮಾಡದ ಕಾರಣ ನಿರ್ದೇಶಕರು ಹೊಸ ಗಿಮಿಕ್ ಮಾಡುತ್ತಿದ್ದಾರೆ. ಎಲ್ಲವೂ ಕೇವಲ ಸಿನಿಮಾ ಪ್ರಚಾರಕ್ಕಾಗಿ ಮಾತ್ರ ಎಂದು ಮತ್ತಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
Here is the Official Trailer of POWER STAR https://t.co/pUOeeGbEYn
— Ram Gopal Varma (@RGVzoomin) July 22, 2020