ಬೆಂಗಳೂರು: ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಸಿನಿಮಾ ಚಿತ್ರಕರಣ ದಿಂದ ಕೊಂಚ ಬ್ರೇಕ್ ಪಡೆದುಕೊಂಡು ಬ್ಯಾಡ್ಮಿಂಟನ್ ಆಡುತ್ತಾ ಬೆವರು ಇಳಿಸುತ್ತಿದ್ದಾರೆ.
ಕಿಚ್ಚಾ ಸುದೀಪ್ ಫಿಟ್ನೆಸ್‍ಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದ ಕಿಚ್ಚಾ ಆಟದ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡುತ್ತಾ ಕೊಂಚ ಕಾಲಕಳೆದಿದ್ದಾರೆ. ಪೈಲ್ವಾನ್ ಸಿನಿಮಾದ ಬಳಿಕವಂತೂ, ವರ್ಕೌಟ್ ಕಿಚ್ಚ ಸುದೀಪ್ ಅವರ ಪ್ರತಿದಿನದ ಹವ್ಯಾಸವಾಗಿದೆ.
ಪೈಲ್ವಾನ್‍ನಂತೆಯೇ ಫ್ಯಾಂಟಮ್ ಚಿತ್ರದಲ್ಲೂ ಕಿಚ್ಚ ಸುದೀಪ್ ಸಖತ್ ಫಿಟ್ ಆಗಿ ಕಾಣುತ್ತಾರೆ. ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋಸ್‍ನಲ್ಲಿ ಹಾಕಲಾಗಿದ್ದ ಫ್ಯಾಂಟಮ್ ಸೆಟ್‍ನಲ್ಲೇ ತಮಗಾಗಿ ಮಿನಿ ಜಿಮ್ ಮಾಡಿಕೊಂಡಿದ್ದರು. ಈಗ ಬೆಂಗಳೂರಿಗೆ ವಾಪಸ್ಸಾಗಿರುವ ಕಿಚ್ಚಾ ಜಿಮ್ ವರ್ಕೌಟ್ ಜೊತೆಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ. ಡಂಬಲ್, ವೇಯ್ಟ್ ಲಿಫ್ಟ್ ಮಾತ್ರವಲ್ಲ ಬದಲಾಗಿ ಬೇರೆ ಕ್ರೀಡೆಗಳ ಮೂಲಕವೂ ಕಿಚ್ಚ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ.
ಸುದೀಪ್ ಒಬ್ಬ ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದಾರೆ. ಸಿನಿಮಾದಲ್ಲಿ ಎಷ್ಟು ಪ್ಯಾಷನ್ ಇದೆಯೋ ಅಷ್ಟೇ ಪ್ರೀತಿಯನ್ನು ಕ್ರೀಡೆಗೆ ಕಿಚ್ಚಾ ತೋರಿಸುತ್ತಾರೆ.