ದುಬೈ: ಐಪಿಎಲ್ 2019ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮಂಕಡ್ ಅವರನ್ನು ಔಟ್ ಮಾಡಿದ ಆರ್.ಅಶ್ವಿನ್ ಅವರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅಶ್ವಿನ್ ಬಹಿರಂಗವಾಗಿ ಮಂಕಡ್ ವಾರ್ನಿಂಗ್ ನೀಡಿದ್ದಾರೆ.
ಅಶ್ವಿನ್ ಮಂಕಡ್ ಔಟ್ ವಿರುದ್ಧ ಟೀಕೆ ಮಾಡಿದ್ದ ಹಲವರು ಕ್ರೀಡಾ ಸ್ಫೂರ್ತಿ ಇಲ್ಲ ಎಂದಿದ್ದರು. ಆದರೆ ತಮ್ಮ ವಿರುದ್ಧ ವಿಮರ್ಶೆಗಳಿಗೆ ತಿರುಗೇಟು ನೀಡಿದ್ದ ಅಶ್ಚಿನ್, ನಿಯಮಗಳ ಅನ್ವಯ ನಾನು ಔಟ್ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದರು. ಇದರ ನಡುವೆಯೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಶ್ವಿನ್‍ರನ್ನು ಕೈಬಿಟ್ಟಿತ್ತು. ಸದ್ಯ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.
Let’s make it clear !! First and final warning for 2020. I am making it official and don’t blame me later on. @RickyPonting #runout #nonstriker @AaronFinch5 and I are good buddies btw.???????? #IPL2020
— Ashwin ???????? (@ashwinravi99) October 5, 2020
ಕಳೆದ ವರ್ಷ ಕೇಳಿ ಬಂದಿದ್ದ ಟೀಕೆಗಳಿಂದ ನಿನ್ನೆಯ ಪಂದ್ಯದಲ್ಲಿ ಸ್ವಲ್ಪ ಹಿಂದೇಟು ಹಾಕಿರುವಂತೆ ಕಂಡ ಅಶ್ವಿನ್, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆರಂಭಿಕರ ಆಟಗಾರ ಫಿಂಚ್‍ಗೆ ಎಚ್ಚರಿಕೆ ನೀಡಿದ್ದರು. ಪಂದ್ಯದ 3ನೇ ಓವರಿನ 4ನೇ ಎಸೆತದಲ್ಲಿ ನಾನ್‍ಸ್ಟ್ರೈಕ್‍ನಲ್ಲಿದ್ದ ಫಿಂಚ್, ಬೌಲರ್ ಬೌಲ್ ಮಾಡುವ ಮುನ್ನವೇ ಕ್ರಿಸ್ ಬಿಟ್ಟು ತೆರಳಿದ್ದರು. ಈ ಸಂದರ್ಭದಲ್ಲಿ ಫಿಂಚ್ ಅವರತ್ತ ನೋಡಿ ನಕ್ಕ ಅಶ್ವಿನ್ ಮಂಕಡ್ ವಾರ್ನಿಗ್ ನೀಡಿದರು. ಇದನ್ನೂ ಓದಿ: ಡೇಂಜರಸ್ ಬೀಮರ್- ಸೈನಿಯಿಂದ ಸಾರಿ ಹೇಳಿಸಿದ ಪಂತ್
Mr. Popular ,I’m swag your bowling then wicket with my jump let moves like Ashwin style .Healthy bowling by #ashwin @ashwinravi99 pic.twitter.com/fcBape4cF7
— ????????????????Jaya@Gayathiri Ka ???????????????? (@SheraryGayathir) October 5, 2020
ಪಂದ್ಯದ ಬಳಿಕ ಘಟನೆ ಕುರಿತು ಟ್ವೀಟ್ ಮಾಡಿರುವ ಅಶ್ವಿನ್, ಇದು ಫಸ್ಟ್ ಅಂಡ್ ಫೈನಲ್ ವಾರ್ನಿಂಗ್ 2020. ಇದನ್ನು ಸ್ಪಷ್ಟಪಡಿಸುತ್ತಿದ್ದು, ನನ್ನನ್ನು ದೂಷಿಸಬೇಡಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕ್ಕಿ ಪಾಟಿಂಗ್‍ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನಾನು ಫಿಂಚ್ ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಶ್ವಿನ್ ಮತ್ತೆ ಮಂಕಡ್ ಪ್ರಯೋಗ ಮಾಡುತ್ತಾರೆ ಎಂಬುದು ಖಚಿತವಾಗಿದೆ.