ನಿನ್ನೆ ವೀಕೆಂಡ್‍ನಲ್ಲಿ ಮಾಂಸಹಾರವನ್ನು ಸೇವಿಸಿರುವ ನೀವು ಇಂದು ಮನೆಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಿರಾ. ಹೀಗಾಗಿ ಇಂದು ಮನೆಯಲ್ಲಿ ಫಟಾ ಫಟ್ ಆಗಿ ದೋಸೆಯನ್ನು ಮಾಡಿ ನೋಡಿ…
Advertisement
ಬೇಕಾಗುವ ಸಾಮಾಗ್ರಿಗಳು:
* ಅಕ್ಕಿ- 1 ಕಪ್
* ಉದ್ದಿನ ಬೇಳೆ-ಅರ್ಧ ಕಪ್
* ತೊಗರಿಬೇಳೆ-2 ಟೀ ಸ್ಪೂನ್
* ಕಡಲೆಬೇಳೆ-2 ಟೀ ಸ್ಪೂನ್
* ಮೆಂತ್ಯೆ- ಅರ್ಧ ಟೀ ಸ್ಪೂನ್
* ಅವಲಕ್ಕಿ- 1 ಕಪ್
* ರವೆ- 2 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಬೇಕಿಂಗ್ ಸೋಡಾ- ಅರ್ಧ ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಹುರಿಯಬೇಕು. ಅಕ್ಕಿಯಲ್ಲಿ ನೀರಿನ ಅಂಶ ಹೋಗುವವರೆಗೆ ಸ್ವಲ್ಪ ಪ್ರಮಾಣದಲ್ಲಿ ಹುರಿದು, ನಂತರ ಅಕ್ಕಿ ಸಂಪೂರ್ಣವಾಗಿ ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು.
Advertisement
* ಇದೇ ಬಾಣಲೆಗೆ ಉದ್ದಿನ ಬೇಳೆ, ತೊಗರಿಬೇಳೆ, ಕಡಲೆಬೇಳೆ, ಮೆಂತ್ಯೆ, ಅವಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು.
* ನಂತರ ಈಗಾಗಲೇ ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿಗೆ ಈ ಬೇಳೆಯ ಪುಡಿ, ರವೆ, ಉಪ್ಪು, ಹಾಗೂ ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು.
* ನಂತರ ಅಗತ್ಯವಿದ್ದಷ್ಟು ನೀರು ಹಾಕಿಕೊಂಡು ಹಿಟ್ಟು ತಯಾರಿಸಿಕೊಂಡು ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹಾಕಬೇಕು. ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ದಿಢೀರ್ ದೋಸೆ ಸವಿಯಲು ಸಿದ್ಧವಾಗುತ್ತದೆ.