ಕೊಪ್ಪಳ: ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೆ.ರಾಂಪೂರು ಸೀಮಾದಲ್ಲಿ ನಡೆದಿದೆ.
ಕುಷ್ಟಗಿ ತಾಲೂಕಿನ ಮಾದಾಪೂರ ಗ್ರಾಮದ ವೀರೂಪಾಕ್ಷಗೌಡ (21) ಹಾಗೂ ಹುಲಿಗೇಮ್ಮ (18) ಆತ್ಮಹತ್ಯೆಗೆ ಶರಣಾಗಿರುವ ಯುವ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಈ ಇಬ್ಬರು ಪ್ರೇಮಿಗಳು ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರೇಮಿಗಳಿಬ್ಬರ ಮನೆಯಲ್ಲಿ ಪ್ರೇಮ ವಿವಾಹಕ್ಕೆ ನಿರಾಕರಿಸಿದ್ದರು. ಇಬ್ಬರು ಅನ್ಯ ಜಾತಿಗೆ ಸೇರಿದವರಾಗಿದ್ದರು. ಇದಕ್ಕಾಗಿ ಮನೆಯವರು ಮದುವೆ ಬೇಡ ಎಂದಿದ್ದಾರೆ. ಇದರಿಂದ ಮನನೊಂದ ಪ್ರೇಮಿಗಳು ಜಮೀನೊಂದರಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ತಾವರಗೇರಾ ಪಿಎಸ್‍ಐ ಗೀತಾಂಜಲಿ ಶಿಂಧೆ ಹಾಗೂ ಸಿಪಿಐ ಚಂದ್ರಶೇಖರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.