ತುಮಕೂರು: ಸೋಶಿಯಲ್ ಮೀಡಿದಲ್ಲಿ ಪರಿಚಯವಾದ ಗೆಳಯಾನನ್ನು ನಂಬಿ ಬಂದ ಯುವತಿ ಮನೆಯಲ್ಲಿ ನೇಣುಬಿಗಿದುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹೊಸಕೋಟೆ ನಗರದ ಎಂವಿ ಬಡಾವಣೆಯಲ್ಲಿ ನಡೆದಿದೆ.
ಅಶ್ವಿನಿ (23) ಮೃತ ಯುವತಿಯಾಗಿದ್ದಾಳೆ. ತುಮಕೂರಿನ ಕೊರಟಗೆರೆ ಮೂಲದ ನಿವಾಸಿಯಾದ ಈಕೆ ಎರಡು ವರ್ಷಗಳಿಂದ ಫೇಸ್‍ಬುಕ್‍ನಲ್ಲಿ ಪರಿಚಯವಾದ ಸುರೇಶ್‍ನನ್ನು ಪ್ರೀತಿಸುತ್ತಿದ್ದಳು. ಆದರೆ ಇದೀಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾ ಮೂಲಕವಾಗಿ ಸುರೇಶ್‍ನನ್ನು ಪ್ರೀತಿಸುತ್ತಿದ್ದಳು. ಸುರೇಶ್ 2 ತಿಂಗಳ ಹಿಂದೆ ಅಶ್ವಿನಿಯನ್ನ ಹೊಸಕೋಟೆಗೆ ಕರೆತಂದು ಬಾಡಿಗೆ ಮನೆಯಲ್ಲಿಟ್ಟಿದ್ದನು. ಸುರೇಶ್ ವಂಚನೆ ಮಾಡಿದ್ದಾನೆ ಎಂದು ಎರಡು ದಿನಗಳಿಂದೆ ಅಶ್ವಿನಿ ಸೂಲಿಬೆಲೆ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. ಸೂಲಿಬೆಲೆ ಪೊಲೀಸರು ರಾಜಿಮಾಡಿ ಕಳುಹಿಸಿದ್ದರು ಎನ್ನಲಾಗಿದೆ.
ಇದೀಗ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನಿಂದ ಕುಟುಂಬಸ್ಥರಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸುರೇಶ್ ಕೊಲೆ ಮಾಡಿರುವುದಾಗಿ ಅಶ್ವಿನಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಘಟನೆ ನಂತರ ಸುರೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸೋಶಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿ ಎಸ್ಕೇಪ್ ಆಗಿದ್ದಾನೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಕಲಾಗಿದೆ.