– ಮಗಳಿಗೆ ಬುದ್ದಿ ಹೇಳಲು ಹೋಗಿ ಕಣ್ಣೀರು ಹಾಕುತ್ತಿರುವ ತಂದೆ
ಗಾಂಧಿನಗರ: ಪ್ರಿಯತಮನಿಗೆ ಜಾಮೀನು ಕೊಡಿಸಲು ಅಪ್ಪ ಒಪ್ಪಲಿಲ್ಲ ಎಂದು ಸಿಟ್ಟಿಗೆದ್ದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ರಾಜ್‍ಕೋಟ್‍ನಲ್ಲಿ ನಡೆದಿದೆ.
17 ವರ್ಷದ ಬಾಲಕಿಯೊಬ್ಬಳು 21ರ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗುವುದಾಗಿ ತಂದೆಯ ಬಳಿ ಹೇಳಿದ್ದಾಳೆ. ಕೋಪಗೊಂಡ ತಂದೆ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಜಾಮೀನು ಕೊಟ್ಟು ಪ್ರಿಯಕರನನ್ನು ಠಾಣೆಯಿಂದ ಬಿಡಿಸುವಂತೆ ತಂದೆಯನ್ನು ಕೇಳಿದ್ದಾಳೆ. ಆದರೆ ಆಕೆಯ ತಂದೆ ಮಗಳ ಮಾತಿಗೆ ಒಪ್ಪಲಿಲ್ಲ. ಇದರಿಂದ ಯುವತಿ ಡಿಸೆಂಬರ್ 31 ರಂದು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಬದುಕನ್ನು ಸರಿಪಡಿಸಲು ಹೋಗಿ ಮಗಳನ್ನೇ ಕಳೆದುಕೊಂಡ ನೋವಿನಲ್ಲಿ ಈಗ ತಂದೆ ಇದ್ದಾರೆ.