ಬಾಗಲಕೋಟೆ: ಪ್ರಸಂಗ ಬಂದರೆ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ನಮ್ಮೆಲ್ಲಾ ಮಂತ್ರಿ ಮಂಡಳದ ಪ್ರಯತ್ನ ಅದೇ ಆಗಿರುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
34 ಮಂತ್ರಿ ಬಿಟ್ಟು ಮಾಡುವುದಕ್ಕೆ ಆಗುವುದಿಲ್ಲ. ಅದರಲ್ಲಿ ಫಿಟ್ ಮಾಡುವ ಪ್ರಯತ್ನ ಮಾಡುತ್ತೇವೆ. ಇನ್ನೂ ಎರಡು ವರ್ಷ ರಮೇಶ್ ಜಾರಕಿಹೊಳಿ ಶಾಸಕರಾಗಿರುತ್ತಾರೆ. ಪ್ರಸಂಗ ಬಂದರೆ ಮಂತ್ರಿ ಆಗುತ್ತಾರೆ ಎಂದು ಉಮೇಶ್ ಕತ್ತಿ ಭವಿಷ್ಯ ನುಡಿದರು.
Advertisement
Advertisement
ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಸಂಗವೇ ಬರಲ್ಲ. ನನ್ನಷ್ಟೇ ವಯಸ್ಸಿನವರಿದ್ದಾರೆ. ನನ್ನ ಆತ್ಮೀಯ ಸ್ನೇಹಿತ, ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಮತ್ತೆ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡುವುದು ಸಿಎಂಗೆ ಬಿಟ್ಟಿದ್ದು. ನಾನು ರಮೇಶ್ ಒಂದೇ ಜಿಲ್ಲೆಯವರು, ಆತ್ಮೀಯರು. ಕ್ಯಾಸೆಟ್ ಗಳನ್ನ ನಿರ್ಮಾಣ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಗೆ ಆ ಕ್ರೀಯೇಟ್ ಕ್ಯಾಸೆಟ್ ನಿಂದ ನೋವಾಗಿದೆ. ಅವರು ಬಹಳ ಸರಳ ವ್ಯಕ್ತಿ. ಕ್ರಿಯೆಟ್ ಕ್ಯಾಸೆಟ್ ಗಳಿಂದ ದುಃಖವಾಗಿದ್ದು ನಿಜವೆಂದರು.
Advertisement
Advertisement
ಶಾಲೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದು, ಆಗ ಯಾವ ರೀತಿ ಇರಬೇಕೆಂದು ಹೇಳಿದ್ದಾರೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ತೀರ್ಮಾನ ತೆಗೆದುಕೊಳ್ಳುತ್ತಾರೆ. ಜುಲೈಯೊಳಗೆ ಶಾಲೆಗಳು ಆರಂಭವಾಗಬಹುದು. ಮೂರನೇ ಅಲೆ ಇದೆ, ಒಂದು ಎರಡು ಬಂದು ಹೋಯ್ತು. ಮೂರನೇ ಅಲೆ ಯಾವಾಗ ಎಲ್ಲಿ ಬರುತ್ತೆ ಗೊತ್ತಿಲ್ಲ. ಈ ಅಲೆ ಬರುತ್ತಾನೆ ಇರುತ್ತವೆ. ಒಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸವೂ ನಡೆಯಬೇಕು. ವ್ಯಾಪಾರ ಉದ್ಯೋಗವೂ ನಡೆಯಬೇಕು. ಈ ಅಲ್ಲದೇ ಇದರ ಜೊತೆ ನಾವು ಹೇಗೆ ಬದುಕಬೇಕು ಎಂದು ನಾವು ನೀವು ನಿರ್ಧರಿಸಬೇಕು. ಶಾಲಾರಂಭ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಉಮೇಶ್ ಕತ್ತಿ ಸುಳಿವು ಕೊಟ್ಟರು.
ದೇಗುಲ ಆರಂಭ ವಿಚಾರಕ್ಕೆ ಬಹುತೇಕ ರಾಜ್ಯವೇ ಅನ್ ಲಾಕ್ ಆಗಿದೆ. ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಾರೆ. ದೇಗುಲಗಳು ಬಹಳ ದಿನಗಳಿಂದ ಲಾಕ್ ಇವೆ. ಒಮ್ಮೆಲೆ ದೇಗುಲ ಬಾಗಿಲು ತೆರೆದರೆ ಜನ ದಟ್ಟಣೆ ಆಗಬಾರದೆಂದು ಕ್ರಮೇಣ ಮಾಡುತ್ತಾರೆ. ಎಲ್ಲವನ್ನೂ ಹಂತ ಹಂತವಾಗಿ ಸರ್ಕಾರ ಮಾಡುತ್ತದೆ. ಇನ್ನೂ ಎಂಟು ಹತ್ತು ದಿನಗಳಲ್ಲಿ ದೇಗುಲ ಓಪನ್ ಆಗಲಿದೆ ಎಂದರು.
ಮೊದಲು ಕಾಂಗ್ರೆಸ್ ನಲ್ಲಿ ಸರಿಮಾಡಿ. ಆಮೇಲೆ ಬಿಜೆಪಿಯೊಳಗೆ ಕೈ ಹಾಕಿ ಎಂದು ಎಸ್.ಆರ್ ಪಾಟೀಲ್ ಗೆ ಕತ್ತಿ ತಿರುಗೇಟು ನೀಡಿದ್ದು, ನೀವು ವಿರೋಧ ಪಕ್ಷದ ನಾಯಕರಾಗಿ. ಸಿದ್ದರಾಮಯ್ಯಯೋ, ಡಿಕೆಶಿಯೋ, ದಲಿತ ಮುಖ್ಯಮಂತ್ರಿ ಎಂದು ಮೊದಲು ತೀರ್ಮಾನ ಮಾಡಿ ಎಂದು ಬಿಜೆಪಿಯಲ್ಲಿ ಸಿಎಂ ಬದಲಾವಣೆ ಕಚ್ಚಾಟಕ್ಕೆ ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆಗೆ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ