ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ದಾಖಲಿಸಿದ್ದಾರೆ.
ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಜಮೀರ್ ದೂರು ದಾಖಲಿಸಿದ್ದು, ಪೊಲೀಸರು ದೂರಿನ ಆಧಾರದ ಅನ್ವಯ ಎನ್‍ಸಿಆರ್ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಮಾಧ್ಯಮಗಳಲ್ಲಿ ಬಂದ ಸಂಬರಗಿ ಅವರ ಮಾತಿನ ವಿಡಿಯೋಗಳನ್ನು ತಮ್ಮ ದೂರಿನೊಂದಿಗೆ ಜಮೀರ್ ಸಾಕ್ಷಿಯಾಗಿ ನೀಡಿದ್ದಾರೆ. ಇದನ್ನೂ ಓದಿ: ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ
ಸಂಬರಗಿ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಲು ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಮ್ಮ ವಕೀಲರೊಂದಿಗೆ ಜಮೀರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಸಂಬರಗಿ ಆಧಾರ ರಹಿತ ಆರೋಪ ಮಾಡಿದ್ದು, ನಾನು ಡ್ರಗ್ಸ್ ಪ್ರಕರಣದ ಆರೋಪಿ ನಟಿ ಸಂಜನಾ ಜತೆ ಶ್ರೀಲಂಕಾದ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೆ ಎಂದಿದ್ದಾರೆ. ಈ ಮೂಲಕ ನನ್ನ ತೇಜೋವಧೆ ಮಾಡಿದ್ದು, ಸಂಬರಗಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಜಮೀರ್ ದೂರಿನಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ
ಸೆ.7 ರಂದು ಸಂಬರಗಿ ಮಾಡಿದ್ದ ಆರೋಪದ ಬಗ್ಗೆ ಪ್ರಕ್ರಿಯೆ ಕೇಳಿದ್ದ ಪಬ್ಲಿಕ್ ಟಿವಿಗೆ ಉತ್ತರಿಸಲು ನಿರಾಕರಿಸಿದ ಜಮೀರ್, ಥ್ಯಾಂಕ್ಯೂ, ಥ್ಯಾಂಕ್ಯೂ ಸ್ಥಳದಿಂದ ಕಾರು ಹತ್ತಿ ಹೋಗಿದ್ದರು. ಆದರೆ ಅಂದೇ ನಟಿ ಸಂಜನಾ, ಶಾಸಕ ಜಮೀರ್ ಬಳಿ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು. ಆದರೆ ಪಬ್ಲಿಕ್ ಟಿವಿ ಪ್ರಶ್ನೆ ಮಾಡಿದ್ದಕ್ಕೆ ಜಮೀರ್, ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ, ಉತ್ತರನೂ ಕೊಡಲ್ಲ ಎಂದು ಹೇಳಿದ್ದರು.
ಜಮೀರ್ ಅಹಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಸಂಜನಾ ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು: ಸಿ.ಟಿ.ರವಿ
2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು.