ಬೆಂಗಳೂರು: ಬಿಗ್‍ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟು ಸ್ಪರ್ಧಿಗಳು ಆಟ ಶುರು ಮಾಡಿದ್ದಾರೆ. ಸದ್ಯ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ಚಕ್ರವರ್ತಿ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತಿದ್ದಾಗ, ಶಮಂತ್ ಪ್ರಶಾಂತ್ ಸಂಬರಗಿಗೆ ಚಿಕ್ಕಪ್ಪ ಎಂದು ಕರೆಯುತ್ತಾರೆ. ಇದಕ್ಕೆ ಪ್ರಶಾಂತ್ ಇನ್ನೊಮ್ಮೆ ನೀನು ನನ್ನನ್ನು ಚಿಕ್ಕಪ್ಪ ಎಂದರೆ ಎಂದು ವಾರ್ನ್ ಮಾಡುತ್ತಾರೆ. ಆಗ ಶಮಂತ್ ಚಿಕ್ಕಪ್ಪ, ಚಿಕ್ಕಪ್ಪ ಎಂದು ಮತ್ತೆ ರೇಗಿಸುತ್ತಾರೆ.
ಈ ವೇಳೆ ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಅವರಿಗೇನಾದರೂ ಮಗಳಿದ್ದಿದ್ದರೆ ಇಷ್ಟೊತ್ತಿಗೆ ಎಂಗೇಜ್‍ಮೆಂಟ್ ಆಗಿರುತ್ತಿತ್ತು ಎಂದು ಶಮಂತ್ ಹೇಳುತ್ತಿದ್ದರು ಎಂದಿದ್ದಾರೆ. ಇದರ ಅರ್ಥ ಇಷ್ಟು ಒಳ್ಳೆಯ ಮಾವ ಸಿಕ್ಕಿದ್ದಾರೆ ಮಗಳನ್ನು ಬಿಡಬಾರದು ಎಂದು ಪ್ರಿಯಾಂಕಾ ತಿಮ್ಮೇಶ್ ವಿವರಿಸುತ್ತಾರುವಾಗ, ಶಮಂತ್ ಮಾವ ಕೆಟ್ಟವರು. ಆದರೆ ನನಗೆ ಒಳ್ಳೆಯವರಷ್ಟೇ ಮಾವ ಬ್ರಿಲಿಯಂಟ್ ಎಂದು ಹೇಳುತ್ತಾರೆ.
ನಂತರ ಚಕ್ರವರ್ತಿ ಚಂದ್ರಚೂಡ್‍ರವರು ನಿನಗೆ ಪ್ರಶಾಂತ್ ಏನು ಅನಿಸುತ್ತಾರೆ, ನಿನಗೆ ಅವರ ಮೇಲೆ ಏನು ಫೀಲಿಂಗ್ ಇದೆ ಎಂದು ಪ್ರಶ್ನಿಸಿದಾಗ, ಶಮಂತ್ ಪ್ರಶಾಂತ್‍ರವರು ನನಗೆ ಒಂದು ರೀತಿ ಅಂಕಲ್ ಮಾದರಿ, ಚಿಕ್ಕಪ್ಪ ನನ್ನ ಹತ್ತಿರ ಏನು ಕಿತ್ತಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೆದು ಕೊಂಡುತ್ತೇನೆ ಪ್ರಶಾಂತ್ ಸಂಬರ್ಗಿಯವರು ಶಮಂತ್ ಅವರಿಂದ ಏನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್