ಮಡಿಕೇರಿ: ಹಚ್ಚ ಹಸಿರಿನ ಕಾಫಿ ತೋಟದ ಸುಂದರ ಪ್ರಕೃತಿ ಸೌಂದರ್ಯ, ತುಂತುರು ಮಳೆ. ಇದರ ನಡುವೆ ಪ್ರಕೃತಿ ಮಾತೆಗೆ ಹಾಲಿನಲ್ಲಿ ಆಭಿಷೇಕ ಮಾಡಿದಂತೆ ಹರಿಯುವ ಜುಳುಜುಳು ನೀರು. ಇದು ಪ್ರವಾಸಿಗರ ಕಣ್ಣಿಂದ ದೂರವಾಗಿರುವ ರಾಜರ ಕಾಲದ ಹಾಲೇರಿ ಜಲಪಾತದ ಸೋಬಗು.
ಕೊಡಗು ಜಿಲ್ಲೆಯಲ್ಲಿ ಕಂಡು ಬರುವ ಹಾಲೇರಿ ಜಲಪಾತದ ದೃಶ್ಯ, ಪ್ರಕೃತಿ ಸೌಂದರ್ಯ ಮಂಜಿನ ಮಡಿಕೇರಿ ಪ್ರವಾಸಿಗರನ್ನು ಆಕರ್ಷಣೆ ಮಾಡುವ ಪ್ರಮುಖ ಪ್ರವಾಸಿ ತಾಣ. ಮಳೆಗಾಲದಲ್ಲಿ ಕಾಣಸಿಗುವ ಜಲಾಧಾರೆಗಳು ಮಾತ್ರ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಣೆಮಾಡುತ್ತಿವೆ.
Advertisement
Advertisement
ಪ್ರಮುಖವಾಗಿ ಪ್ರವಾಸಿಗರ ಕಣ್ಣಿಂದ ದೂರವಿರುವ ಹಾಲೇರಿ ಜಲಾಪಾತ, ಪ್ರವಾಸಿರನ್ನು ಕೈಬೀಸಿಕರೆಯುತ್ತಿದೆ. ಮಳೆಗಾಲ ಆರಂಭವಾದರೆ ಕೊಡಗು ಜಿಲ್ಲೆಯಲ್ಲಿ ಎಷ್ಟೋ ಜಲಧಾರೆಗಳು ಕಾಣಸಿಕ್ಕುತ್ತವೆ. ಅದರಲ್ಲಿ ಕೆಲವು ಪ್ರವಾಸಿ ತಾಣಳಲ್ಲಿ ಕಾಣಸಿಗುವ ಜಲಾಪಾತಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಆದರೆ ಜಿಲ್ಲೆಯಲ್ಲಿ ಎಷ್ಟೋ ಜಲಾಪಾತಗಳು ಪ್ರವಾಸಿಗರ ಕಣ್ಣಿಗೆ ಕಾಣದಂತೆ ತಮ್ಮ ವೈಯ್ಯಾರವನ್ನು ಪ್ರದರ್ಶನ ಮಾಡುತ್ತಿವೆ. ಪ್ರವಾಸಿಗರಿಗೆ ಕಾಣದಿರುವ ಜಲಾಧಾರೆಗಳಲ್ಲಿ ಒಂದಾದ ಹಾಲೇರಿ ಗ್ರಾಮದ ಹಾಲೇರಿ ಜಲಾಪಾತ ಪ್ರಮುಖವಾದದ್ದು, ಈ ಜಲಾಪಾತ ಹಾಲೇರಿ ಗ್ರಾಮದಲ್ಲಿ ಹಚ್ಚಹಸಿರಿನ ಕಾಫಿತೋಟಗಳ ನಡೆವೆ ಹಾಲ್ನೋರೆಯಂತೆ ಧುಮ್ಮಿಕ್ಕುತ್ತದೆ.
Advertisement
Advertisement
ಮೈಸೂರಿನಿಂದ ಮಡಿಕೇರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಮಡಿಕೇರಿಯ ಪಕ್ಕ ಸುಮಾರು 8 ಕಿ.ಮೀ. ದೂದಲ್ಲಿ ಈ ಜಲಾಪಾತ ಇದೆ. ಹಾಲ್ನೋರೆಯಂತೆ ಮೇಲಿಂದ ಕೆಳಕ್ಕೆ ಹರಿಯುತ್ತಿರುವ ಹಾಲೇರಿ ಜಲಾಪಾತದ ಸೋಬಗು ನೋಡೋದೆ ಚಂದ. ಕೊಡಗು ಜಿಲ್ಲೆ ಪ್ರವಾಸಿತಾಣಗಳಿಗೆ ಹೇಳಿಮಾಡಿಸಿದ ಪ್ರವಾಸಿ ತಾಣ. ಮಳೆ ಮಾತ್ರ ಹೆಚ್ಚು ಪ್ರಾವಾಸಿಗರನ್ನು ತನ್ನತ ಸೇಳೆಯುವ ಆಕರ್ಷಣೆಯ ಕೇಂದ್ರ ಬಿಂದು ಎಂದೇ ಹೇಳಬಹುದು. ಇಲ್ಲಿನ ನಯನ ಮನೋಹರ ಹಾಲೇರಿ ಜಾಲಪಾತ ತುಂಬಿ ಕಾಫಿತೋಡದಲ್ಲಿ ಹರಿಯುತ್ತಿದೆ. ಹೆಚ್ಚು ಮಳೆ ಬಿದ್ದ ಕಾರಣ ಜಿಲ್ಲೆಯಲ್ಲಿರುವ ಹಲವು ಜಲಧಾರೆಗಳು ಹೋಳೆಗಳು ಜೀವ ಪಡೆದುಕೊಂಡಿವೆ, ಅದರಲ್ಲಿ ಹಾಲೇರಿ ಜಲಾಪಾತ ಆಕರ್ಷಣೆಯ ಕೇಂದ್ರಬಿಂದು.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಕೃತಿ ಸೌಂದರ್ಯದ ನಡುವೆ ಮೈತುಂಬಿ ಹರಿಯುತ್ತಿರುವ ಈ ಜಲಾಪಾತವನ್ನು ನೋಡಿದ ಕೆಲ ಪ್ರವಾಸಿಗರು, ನಯಾಗರ ಪಾಲ್ಸ್‍ಗೆ ಹೋಲಿಕೆಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಬಂಡೆಗಳ ಮಧ್ಯೆ ಅದೃಶ್ಯವಾಗಿದ್ದ ಈ ಜಲಾಪಾತ ಮಳೆಗಾಲ್ಲಿ ತುಂಬಿಹರಿಯುತ್ತದೆ. ಬೆಟ್ಟ ಗುಡ್ಡಗಳ ನಡುವೆ ಹರಿದು ಬರುವ ನೀರು ಎತ್ತರದಿಂದ ಕೆಳಗೆ ಬೀಳುವ ದೃಶ್ಯ ರೊಮನಾಂಚನಕಾರಿದೆ.