ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಷ್ಠಿತ ಲೀಜನ್ ಆಫ್ ಮೆರಿಟ್ ಪದಕವನ್ನು ನೀಡಿ ಗೌರವಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರಣ್‍ಜೀತ್ ಸಿಂಗ್ ಸಂಧು ಅವರು ಲೀಜನ್ ಆಫ್ ಮೆರಿಟ್ ಪದಕವನ್ನು ಸ್ವೀಕರಿಸಿದ್ದಾರೆ. ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಅವರು ಪದಕವನ್ನು ಹಸ್ತಾಂತರಿಸಿದ್ದಾರೆ. ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ನಾಯಕತ್ವ ವಹಿಸಿದ್ದಕ್ಕೆ ಹಾಗೂ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವಂತೆ ಮಾಡಿದ್ದಕ್ಕೆ ಟ್ರಂಪ್ ಪದಕವನ್ನು ನಿಡಿದ್ದಾರೆ.
Advertisement
US confers ‘Legion of Merit’ award on PM @narendramodi
In recognition of PM’s steadfast leadership & vision for India’s emergence as a global power, & his exemplary contribution for advancement of ???????????????? ties & promoting global peace & prosperity.
https://t.co/OKWEnNzLbA pic.twitter.com/TEZ1oE8ZS7
— Taranjit Singh Sandhu (@SandhuTaranjitS) December 22, 2020
Advertisement
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಪದಕವನ್ನು ಕೊಡಮಾಡಿದ್ದು, ಉಭಯ ದೇಶಗಳ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ನಾಯಕತ್ವ ವಹಿಸಿದ್ದಕ್ಕೆ ಪದಕ ನೀಡಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ಲೀಜನ್ ಆಫ್ ಮೆರಿಟ್ ಅತ್ಯುನ್ನತ ಪದಕವನ್ನು ದೇಶದ ಮುಖ್ಯಸ್ಥರು ಅಥವಾ ಸರ್ಕಾರಕ್ಕೆ ನೀಡಲಾಗುತ್ತದೆ. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಸಲು ನಾಯಕತ್ವ, ದೂರ ದೃಷ್ಟಿ ಹಾಗೂ ಭಾರತ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಜನ್ ಆಫ್ ಮೆರಿಟ್ ಕೊಡಮಾಡಲಾಗಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ‘ಲೀಜನ್ ಆಫ್ ಮೆರಿಟ್’ ಪದಕ ಪ್ರದಾನ ಮಾಡಿದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪರವಾಗಿ ಅಮೆರಿಕಕ್ಕೆ ಭಾರತದ ರಾಯಭಾರಿಯಾದ ತರಣ್‌ಜೀತ್ ಸಿಂಗ್ ಸಂಧು ಅವರು ‘ಲೀಜನ್ ಆಫ್ ಮೆರಿಟ್’ ಪದಕವನ್ನು ಸ್ವೀಕರಿಸಿದ್ದಾರೆ. pic.twitter.com/5si9Cx0EGK
— Pratap Simha (@mepratap) December 22, 2020
ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೆ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಶಿಂಜೊ ಅಬೆ ಅವರಿಗೂ ಲೀಜನ್ ಆಫ್ ಮೆರಿಟ್ ನೀಡಲಾಗಿದ್ದು, ದೇಶಗಳ ರಾಯಭಾರಿಗಳು ಪದಕವನ್ನು ಸ್ವೀಕರಿಸಿದ್ದಾರೆ ಎಂದು ಒ’ಬ್ರಿಯೆನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.