– ಊಟ ಮಾಡುವ ಶೇ.17ರಷ್ಟು ಆಹಾರ ವ್ಯರ್ಥ
ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಪ್ರತಿಯೊಬ್ಬ ವ್ಯಕ್ತಿಯಿಂದ 50 ಕೆ.ಜಿ. ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಯುನೈಟೆಡ್ ನೇಷನ್ಸ್ ಎನ್ವರಾನ್ಮೆಂಟ್ ಪ್ರೋಗ್ರಾಮ್ಸ್ ಫುಡ್ ವೇಸ್ಟ್ ಇಂಡೆಕ್ಸ್-2021ರ ವರದಿಯಲ್ಲಿ ಬಹಿರಂಗವಾಗಿದೆ.
Advertisement
ಹೊಸ ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ ಬಿಡುಗಡೆಯಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರಿಂದ ಪ್ರತಿ ವರ್ಷ 50 ಕೆ.ಜಿ. ಆಹಾರ ವ್ಯರ್ಥವಾಗುತ್ತಿದ್ದು, ಸುಮಾರು 931 ಮಿಲಿಯನ್ ಮೆಟ್ರಿಕ್ ಟನ್‍ನಷ್ಟು ಆಹಾರವನ್ನು ಕಸಕ್ಕೆ ಸುರಿಯಲಾಗುತ್ತಿದೆ. ಅಂದರೆ 2019ರಲ್ಲಿ ಸೇವಿಸಲು ಒಟ್ಟು ಲಭ್ಯವಿದ್ದ ಆಹಾರದಲ್ಲಿ ಶೇ.17ರಷ್ಟನ್ನು ವ್ಯರ್ಥ ಮಾಡಲಾಗಿದೆ. ಮನೆ, ಸಂಸ್ಥೆ, ರೀಟೇಲ್ ಔಟ್‍ಲೆಟ್ಸ್ ಹಾಗೂ ರೆಸ್ಟೋರೆಂಟ್‍ಗಳಿಂದ ಆಹಾರವನ್ನು ಕಸಕ್ಕೆ ಸುರಿಯಲಾಗುತ್ತಿದೆ. ಮನೆಯ ಹಂತದಲ್ಲಿ ಪ್ರತಿ ವರ್ಷ ಗ್ರಾಹಕ ಮಟ್ಟದ ಆಹಾರದಲ್ಲಿ ಶೇ.61ರಷ್ಟು ಡಸ್ಟ್‍ಬಿನ್ ಸೇರುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement
Advertisement
ಆದಾಯ ಮಟ್ಟವನ್ನು ಲೆಕ್ಕಿಸದೆ ಪ್ರತಿ ದೇಶದಲ್ಲಿಯೂ ಆಹಾರ ವ್ಯರ್ಥವಾಗುತ್ತಿದ್ದು, ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತದಲ್ಲಿ ಪ್ರತಿ ವರ್ಷ ಮನೆಯ ಹಂತದಲ್ಲಿ ಪ್ರತಿಯೊಬ್ಬ ವ್ಯಕ್ತಿಯಿಂದ 50 ಕೆ.ಜಿ.ಆಹಾರ ವ್ಯರ್ಥವಾಗುತ್ತಿದೆ. 65 ಕೆ.ಜಿ. ಬಾಂಗ್ಲಾದೇಶ, 74 ಕೆ.ಜಿ.ಪಾಕಿಸ್ತಾನ, 76 ಕೆ.ಜಿ.ಶ್ರೀಲಂಕಾ, 79 ಕಿ.ಜಿ.ನೇಪಾಳ ಹಾಗೂ ಅಫ್ಘಾನಿಸ್ಥಾನದಲ್ಲಿ 82 ಕೆ.ಜಿ.ಯಷ್ಟು ಆಹಾರವನ್ನು ಕಸಕ್ಕೆ ಹಾಕಲಾಗುತ್ತಿದೆ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.
Advertisement
ಇದೆಲ್ಲದರ ಮಧ್ಯೆ ಕೋಟ್ಯಂತರ ಜನ ಹಸಿವಿನಿಂದ ಬಳುತ್ತಿದ್ದಾರೆ ಎಂಬುದು ಸಹ ಬೇಸರದ ಸಂಗತಿಯಾಗಿದೆ. ವಿಶ್ವಸಂಸ್ಥೆಯ ಲೆಕ್ಕಾಚಾರದ ಪ್ರಕಾರ 2019ರಲ್ಲಿ ಸುಮಾರು 690 ಮಿಲಿಯನ್ ಜನ ಹಸಿವಿನಿಂದ ಬಳಲಿದ್ದಾರೆ. ಕೊರೊನಾ ಸಮಯದಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.