– ನಾನು ಆರೋಪಿ ಅಲ್ಲದಿದ್ರೂ ಪ್ರತಿದಿನ ವಿಚಾರಣೆ
– ನ್ಯಾಯ ಸಮ್ಮತವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ
ಬೆಂಗಳೂರು: ಪ್ರಕರಣದಲ್ಲಿ ನಾನು ಆರೋಪಿಯೋ? ಸಂತ್ರಸ್ತೆಯೋ ಎಂದು ಪ್ರಶ್ನಿಸಿ ಸಿಡಿ ಪ್ರಕರಣದ ಲೇಡಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಳೆ.
ನಾನು ಆರೋಪಿಯಿಲ್ಲ ಅದರೂ ಪ್ರತಿದಿನ ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡಲಾಗುತ್ತಿದೆ. ಆರೋಪಿಯನ್ನ ಕೇವಲ ಎರಡು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಬಿಟ್ಟು ಕಳಿಸ್ತಾರೆ. ಆದರೆ ನನ್ನನ್ನು ಇಡೀ ದಿನ ವಿಚಾರಣೆ ಮಾಡ್ತಾರೆ ಎಂದು ಆರೋಪಿಸಿ ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಳೆ.
ಪತ್ರದಲ್ಲಿ ಏನಿದೆ?
ನನ್ನನ್ನ ಇಡೀ ದಿನ ವಿಚಾರಣೆ ಮಾಡುತ್ತಾರೆ. ಪ್ರತಿದಿನ ವಿಚಾರಣೆ ನೆಪದಲ್ಲಿ ಕರೆದು ಕಿರುಕುಳ ನೀಡಲಾಗುತ್ತಿದೆ. ಗೃಹ ಇಲಾಖೆ ನನ್ನ ಬಳಿ ವಿಚಾರಿಸದೇ ಎಸ್‍ಪಿಪಿಗಳನ್ನ ನೇಮಕ ಮಾಡಿದೆ. ಆರೋಪಿಯನ್ನ ಕೇವಲ ಎರಡು ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಬಿಟ್ಟು ಕಳಿಸ್ತಾರೆ. ಇದಕ್ಕೆ ನನ್ನ ಆಕ್ಷೇಪವಿದೆ. ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನೊ ನಂಬಿಕೆ ನನಗೆ ಇಲ್ಲ. ನಾನು ಆರೋಪಿ ಅಲ್ಲದಿದ್ರೂ ಪ್ರತಿದಿನ ವಿಚಾರಣೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರಲಿ ಅಂದಿದ್ದಾರೆ. ಇದು ನನಗೆ ಆಘಾತವನ್ನ ಉಂಟು ಮಾಡಿದೆ. ಆರೋಪಿ ವಿರುದ್ಧ ಗಂಭೀರವಾದ ವಿಚಾರಣೆ ಮಾಡ್ತಿದ್ದಾರೆ ಅನ್ನೊ ನಂಬಿಕೆಯಿಲ್ಲ. ನಾನು ಆರೋಪಿ ಅಲ್ಲದಿದ್ದರೂ ಆರ್ ಟಿ ನಗರದ ನನ್ನ ಪಿಜಿ ಮೇಲೆ ದಾಳಿ ಮಾಡಿ ಸಾಕ್ಷಿ ನಾಶ ಮಾಡುವ ಕೆಲಸ ಮಾಡಿದ್ದಾರೆ. ಎಸ್‍ಐಟಿ ರಮೇಶ್ ಜಾರಕಿಹೊಳಿಯನ್ನು ಓಡಾಡಿಕೊಂಡಿರಲು ಬಿಟ್ಟು ಪ್ರತಿ ದಿನ ನನ್ನ ವಿಚಾರಣೆ ಮಾಡುತ್ತಿದ್ದಾರೆ. ನ್ಯಾಯ ಸಮ್ಮತವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ ಅಂತಾ ನನಗೆ ಅನ್ನಿಸ್ತಿದೆ ಎಂದು ಸಂತ್ರಸ್ತೆ ಆರೋಪಿಸಿ ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾಳೆ.