ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

Public TV
1 Min Read
Sushanth Neighbour

ಮುಂಬೈ: ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಮೊದಲ ಬಾರಿಗೆ ಸುಶಾಂತ್ ಪಕ್ಕದ ಮನೆಯ ಮಹಿಳೆ ಮಾಧ್ಯಮಗಳ ಮುಂದೆ ತಮಗೆ ತಿಳಿದಿರುವ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಮಹಿಳೆ ಹೇಳಿಕೆ ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Sushant Singh Rajput Drive 1200 2 1 medium

ಸುಶಾಂತ್ ಸಾವಿನ ಹಿಂದಿನ ದಿನ ಅಂದ್ರೆ ಜೂನ್ 13ರಂದು ಅವರ ಮನೆಯ ದೀಪಗಳನ್ನ ಬೇಗ ಆರಿಸಲಾಗಿತ್ತು. ಸಾಮಾನ್ಯವಾಗಿ ಸುಶಾಂತ್ ತಡರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಮನೆಯ ಲೈಟ್ ಗಳನ್ನು ತಡವಾಗಿ ಆರಿಸಲಾಗುತ್ತದೆ. ಜೂನ್ 13ರಂದು ರಾತ್ರಿ 11 ಗಂಟೆಯೊಳಗೆ ಅಡುಗೆ ಮನೆ ಹೊರತು ಪಡಿಸಿದಂತೆ ಎಲ್ಲ ಲೈಟ್ ಗಳ ಆಫ್ ಆಗಿದ್ದವು. ಜೂನ್ 13ರ ರಾತ್ರಿ ಸುಶಾಂತ್ ಮನೆಯಲ್ಲಿ ಪಾರ್ಟಿ ನಡೆದಿತ್ತು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಆ ರಾತ್ರಿ ಮನೆಯಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ ಎಂದು ಸುಶಾಂತ್ ಸಹಾಯಕ ಹೇಳಿದ್ದ. ಅಂದು ಮಾತ್ರ ಲೈಟ್ ಬೇಗ ಆರಿಸಿದ್ದು ಅನುಮಾನ ಮೂಡಿಸುತ್ತೆ ಎಂದು ಮಹಿಳೆ ಹೇಳಿದ್ದಾರೆ.

ಜೂನ್ 13ರಂದು ಸುಶಾಂತ್ ಮನೆಯಲ್ಲಿ ಗೆಳೆಯ ಸಿದ್ಧಾರ್ಥ್ ಪಿಠಾಣಿ, ಅಡುಗೆಯವ ನೀರಜ್ ಸಿಂಗ್ ಮತ್ತು ಮನೆಯ ಸಹಾಯಕ ಕೇಶವ್ ಮೂವರಿದ್ದರು. ಬೆಳಗ್ಗೆ ಎಂದಿನಂತೆ ಸಿದ್ಧಾರ್ಥ್ ಪಿಠಾಣಿ ತಡವಾಗಿ ಅಂದ್ರೆ ಬೆಳಗ್ಗೆ 9 ಗಂಟೆಗೆ ಎದ್ದಿದ್ದರು. ಬೆಳಗ್ಗೆ ಸುಶಾಂತ್ ಕುಕ್ ನೀರಜ್ ನಿಂದ ನೀರು ಪಡೆದು ಕುಡಿದು, ನಂತ್ರ ಜ್ಯೂಸ್ ಸೇವಿಸಿ ತಮ್ಮ ಕೋಣೆ ಸೇರಿದ್ದರು. ಮಧ್ಯಾಹ್ನವಾದರೂ ಸುಶಾಂತ್ ಕೋಣೆಯಿಂದ ಹೊರ ಬರದಿದ್ದಾಗ ಬಾಗಿಲು ಒಡೆದು ನೋಡಿದಾಗ ಸುಶಾಂತ್ ಮೃತದೇಹ ಪತ್ತೆಯಾಗಿತ್ತು.

 

 

Share This Article
Leave a Comment

Leave a Reply

Your email address will not be published. Required fields are marked *