ಶ್ರೀನಗರ : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಮಾತಿನಂತೆ, ಪೊಲೀಸ್ ಪೇದೆಯೊರ್ವರು ತನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇಲಾಖೆಗೆ ನಕಲಿ ದಾಖಲೆ ನೀಡಿ ಸುಮಾರು 5.53 ಲಕ್ಷ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಕ್ಕಿಬಿದ್ದಿದ್ದಾರೆ.
ಜಮ್ಮು-ಕಾಶ್ಮೀರದ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆಗೆ ಪಂಗನಾಮ ಹಾಕಿದ ಪೊಲೀಸ್ ಪೇದೆಯನ್ನು ರವಿ ಕುಮಾರ್ ಎಂದು ಗುರುತಿಸಲಾಗಿದೆ. ರವಿ ಕುಮಾರ್ ಇಲಾಖೆಗೆ ತನ್ನ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ನಕಲಿ ದಾಖಲೆ ನೀಡಿ 5.53 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದರು. ಆದರೆ ಇವರ ತಂದೆ ಮೃತಪಟ್ಟು ಹಲವು ವರ್ಷಗಲೇ ಕಳೆದಿದೆ ಎಂಬ ಮಾಹಿತಿ ಸಿಕ್ಕಿದೆ.
ರವಿ ಕುಮಾರ್ ಇಲಾಖೆಗೆ ಮಾಡಿರುವ ಮೋಸದ ಕುರಿತು ಮಾಹಿತಿ ಪಡದು ಈಗಾಗಲೇ ಮೀಸಲು ಶಸ್ತ್ರಾಸ್ರ ಪಡೆ ಕಾನೂನಿನ ಪ್ರಕಾರ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಅಪರರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ರವಿ ಕುಮಾರ್‍ನ್ನು ವಿಚಾರಿಸಿದಾಗ ತನ್ನ ತಂದೆ ಪ್ರೇಮ ದಾಸ್ ಅವರ ಆರೋಗ್ಯ ಸರಿಯಿಲ್ಲ ಎಂದು ಮೆಡಿಕಲ್ ಸರ್ಟಿಫಿಕೆಟ್ ನೀಡಿ ಇಲಾಖೆಯಿಂದ ರವಿ ಕುಮಾರ್ ಬ್ಯಾಂಕ್ ಖಾತೆಗೆ 1,92,553 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿದಾಗ 2016ರಲ್ಲೇ ರವಿ ಕುಮಾರ್ ಅವರ ತಂದೆ ಮೃತಪಟ್ಟಿರುವುದು ದೃಢಪಟ್ಟಿದೆ.
ತಂದೆ ಮೃತಪಟ್ಟಿದ್ದರೂ ಕುಮಾರ್ ಮಾತ್ರ ನಕಲಿ ದಾಖಲೆಯನ್ನು ಇಲಾಖೆಗೆ ನೀಡಿ ಈವರೆಗೆ 5,53,695 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.