ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.
ಭಾಸ್ಕರ್ ರಾವ್ ಕಳೆದ 5 ದಿನದಿಂದ ಹೋಂ ಕ್ವಾರಂಟೈನ್‍ನಲ್ಲಿದ್ದರು. ಇಂದು ಬೆಳಗ್ಗೆ ಕೊರೊನಾ ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
Advertisement
Thanks for all your blessings n good wishes!! Tested Negative!! Relieved, back to work … pic.twitter.com/2KmEINhM49
— Bhaskar Rao (@Nimmabhaskar22) July 21, 2020
Advertisement
“ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದಿನಿಂದ ಕೆಲಸಕ್ಕೆ ಹಾಜರಾಗುತ್ತೀನಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿದ್ದರು.
Advertisement
My driver is tested Corona positive, I have home quarantined myself for 4 days and will get myself tested again on Monday for the (5) fifth time since 3 months. I had to be in numerous inadvertent interactions with positive cases. Seek your good wishes, am not yet positive !!
— Bhaskar Rao (@Nimmabhaskar22) July 17, 2020
Advertisement
ಭಾಸ್ಕರ್ ರಾವ್ ಕಾರು ಚಾಲಕ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಪಾಸಿಟಿವ್ ಎಂದು ಗೊತ್ತಾದ ಬಳಿಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಭಾಸ್ಕರ್ ರಾವ್, “ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಲಿದ್ದೇನೆ. 3 ತಿಂಗಳ ನಂತರ ಐದನೇ ಬಾರಿಗೆ ಸೋಮವಾರ ಮತ್ತೆ ಪರೀಕ್ಷೆಗೆ ಒಳಗಗಾಗಲಿದ್ದೇನೆ. ಹಲವಾರು ಪಾಸಿಟಿವ್ ಪ್ರಕರಣ ಹೊಂದಿದವರ ಜೊತೆ ಸಂವಹನ ಮಾಡಿದ್ದೇನೆ. ನಿಮ್ಮ ಶುಭ ಹಾರೈಕೆಗಳಿಂದ ಪಾಸಿಟಿವ್ ಆಗಿಲ್ಲ ಎಂದು ಬರೆದುಕೊಂಡಿದ್ದರು.