– ಟೋಲ್ ಗೇಟ್ ಶುಲ್ಕ ಕಟ್ಟಲು ನಿರಾಕರಣೆ
– ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಾರು ಚಲಾಯಿಸಿದ ಉದ್ಯಮಿ
ಕಾರವಾರ: ಟೋಲ್ ಗೇಟ್ ನಲ್ಲಿ ಶುಲ್ಕ ಕಟ್ಟಲು ಗಲಾಟೆ ಮಾಡಿದ ಉದ್ಯಮಿಯನ್ನು ತಡೆಯಲು ಹೋದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಾರು ಚಲಾಯಿಸಿ ಹಲ್ಲೆ ನಡೆಸಲು ಮುಂದಾದ ನಾಲ್ವರನ್ನು ಬಂಧಿಸಲಾಗಿದೆ.
ಅಂಕೋಲಾದ ಉದ್ಯಮಿ ಸುರೇಶ್ ನಾಯ್ಕ, ಅಲಗೇರಿ ಬೊಮ್ಮಯ್ಯ ನಾಯ್ಕ, ಗೋಪಾಲ ನಾಯ್ಕ ಬಂಧಿತರು. ಸುರೇಶ್ ನಾಯ್ಕನ ಅಪ್ರಾಪ್ತ ಪುತ್ರನನ್ನು ರಿಮ್ಯಾಂಡ್ ಹೋಂಗೆ ಶಿಫ್ಟ್ ಮಾಡಲಾಗಿದೆ.
Advertisement
Advertisement
ಅಂಕೋಲಾ ಟೋಲ್ ಗೇಟ್‍ನಲ್ಲಿ ಹೆದ್ದಾರಿ ಸುಂಕದ ವಿಚಾರವಾಗಿ ನಾಲ್ವರು ಟೋಲ್ ಗೇಟ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ನಿಂತಿದ್ದರು. ಈ ವೇಳೆ ಕಾರವಾರದಿಂದ ಅಂಕೋಲಾಕ್ಕೆ ತೆರಳುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಅವರು ಟೋಲ್ ಗೇಟ್ ಸಿಬ್ಬಂದಿ ಜೊತೆ ನಡೆಯುತ್ತಿದ್ದ ಗಲಾಟೆ ಕಂಡು ನಾಲ್ವರು ಆರೋಪಿಗಳಲ್ಲಿ ಜಗಳ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಉದ್ಯಮಿ ವಾಹನದ ಎದುರು ನಿಂತಿದ್ದ ಅಧಿಕಾರಿ ಮೇಲೆ ಏಕಾಏಕಿ ಕಾರು ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ.
Advertisement
Advertisement
ಘಟನೆಯ ಸಂಪೂರ್ಣ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.