ದುಬೈ: ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಮಿಂಚಿನ ಅರ್ಧಶತಕ ಮತ್ತು ರಿಷಭ್ ಪಂತ್ ಅವರು ಅಬ್ಬರದ ಬ್ಯಾಟಿಂಗ್ ಫಲವಾಗಿ ಐಪಿಎಲ್ ಏಳನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ಚೆನ್ನೈಗೆ 176 ರನ್‍ಗಳ ಟಾರ್ಗೆಟ್ ನೀಡಿದೆ.
ಡೆಲ್ಲಿಗೆ ಸಾಧಾರಣ ಆರಂಭ ನೀಡಿದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ ಡೆಲ್ಲಿ 36 ರನ್ ಸೇರಿಸಿತು. ಪವರ್ ಪ್ಲೇ ವೇಳೆ ಚೆನ್ನೈ ತಂಡ ಉತ್ತಮವಾಗಿ ಫೀಲ್ಡಿಂಗ್ ಮಾಡಿತು. ನಂತರ ಚೆನ್ನೈ ಸ್ಪಿನ್ನರ್ ಗಳನ್ನು ದಂಡಿಸಿದ ಧವನ್ ಮತ್ತು ಪೃಥ್ವಿ ಶಾ ಬ್ಯಾಕ್ ಟು ಬ್ಯಾಕ್ ಫೋರ್ ಹೊಡೆದು ಮಿಂಚಿದರು. ಈ ವೇಳೆ ಭರ್ಜರಿಯಾಗಿ ಆಡಿದ ಪೃಥ್ವಿ ಶಾ 35 ಎಸೆತಗಳಲ್ಲಿ ಐದನೇ ಐಪಿಎಲ್ ಅರ್ಧಶತಕ ಪೂರ್ಣಗೊಳಿಸಿದರು.
Advertisement
The big partnership between Shaw and Dhawan comes to an end.#DC lose their first wicket with 94 runs on the board.
Live – https://t.co/Ju3tim4Ffx #Dream11IPL #CSKvDC pic.twitter.com/qe0sXoNzb7
— IndianPremierLeague (@IPL) September 25, 2020
Advertisement
ಸಿಕ್ಸರ್ ಮತ್ತು ಫೋರುಗಳ ಸುರಿಮಳೆಗೈದ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್‍ಗಳು, 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 88 ರನ್ ಸಿಡಿಸಿದರು. ಈ ವೇಳೆ 35 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 43 ಎಸೆತಗಳಿಗೆ 64 ರನ್ (9 ಫೋರ್, 1 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ಪೃಥ್ವಿ ಶಾ ಧೋನಿಯವರ ಸ್ಟಂಪಿಂಗ್‍ಗೆ ಬಲಿಯಾದರು.
Advertisement
Out of the crease? MSD will do the rest.
Prithvi Shaw charged down the track and missed. Stumped – no messing with #MSDhoni behind the stumps.
WATCH https://t.co/1bJst5HY89 #CSKvDC #Dream11IPL
— IndianPremierLeague (@IPL) September 25, 2020
Advertisement
15 ಓವರಿನ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ 124 ರನ್ ಕಲೆಹಾಕಿತು. ಬಳಿಕ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ರನ್ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದರು. ಜೊತೆಗೆ ಈ ಜೋಡಿ 35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 18ನೇ ಓವರಿನ ಕೊನೆಯ ಬಾಲಿನಲ್ಲಿ ಧೋನಿ ಹಿಡಿದ ಸೂಪರ್ ಕ್ಯಾಚಿಗ್ 26 ರನ್ ಗಳಿಸಿದ್ದ ಐಯ್ಯರ್ ಬಲಿಯಾದರು.
Got something bothering you in the eye, Prithvi?
MS Dhoni – Don't worry, I have you covered ????????#Dream11IPL pic.twitter.com/OyelNC2MWj
— IndianPremierLeague (@IPL) September 25, 2020
ಈ ವೇಳೆ ಮಿಂಚಿನ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಅವರು, 25 ಬಾಲಿಗೆ 37 ರನ್ ಸಿಡಿಸಿ ಡೆಲ್ಲಿ ತಂಡ 170 ಗಡಿ ದಾಟಲು ಸಹಾಯಕವಾದರು. ಈ ಇನ್ನಿಂಗ್ಸ್‍ನಲ್ಲಿ ಪಂತ್ 6 ಭರ್ಜರಿ ಫೋರ್ ಚಚ್ಚಿದರು. ಚೆನ್ನೈ ತಂಡ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಫೀಲ್ಡಿಂಗ್ ಕ್ಲಿಕ್ ಆಯ್ತು.