ಪುತ್ರನ ನಿಶ್ಚಿತಾರ್ಥದಲ್ಲಿ ನಿಯಮ ಉಲ್ಲಂಘಿಸಿದ ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read
SMG LAKSHMI SON AV 5 e1597634224240

ಶಿವಮೊಗ್ಗ: ತಮ್ಮ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ.

SMG medium

ಹೌದು. ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಹಿತಾ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಬಾರದೆಂಬ ನಿಯಮವಿದ್ದರೂ, ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನರು ಭಾಗಿಯಾಗಿದ್ದಾರೆ. ಈ ಮೂಲಕ ಶಾಸಕಿ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ.

SMG 13 medium

ನಗರದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಎಂಗೇಜ್ ಮೆಂಟ್‍ನಲ್ಲಿ ಹಿತಾ ಮತ್ತು ಮೃಣಾಲ್ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಇದಕ್ಕೂ ಮೊದಲು ಪೂಜೆ-ಪುನಸ್ಕಾರ ನಡೆದಿದ್ದು, ಶಾಸಕಿ ಪಾಲಗೊಂಡಿದ್ದರು.

ಶಾಸಕ ಸಂಗಮೇಶ್ ಕುಟುಂಬದವರು ಆಹ್ವಾನಿತರಿಗೆಲ್ಲರಿಗೂ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಗೌರವ ಸೂಚಿಸಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಭಾಗಿಯಾಗಿದ್ದರು.

SMG 1 3 medium

Share This Article
Leave a Comment

Leave a Reply

Your email address will not be published. Required fields are marked *