ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

Public TV
1 Min Read
TMC

– ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಪಶ್ಚಿಮ ಬಂಗಾಳದ ಜಾಗ್ರ್ರಾಮ್ ಜಿಲ್ಲೆಯಲ್ಲಿ ನಡೆದಿದೆ.

ಗೋಪಿಬಲ್ಲವ್ ಪುರದ ಪಕ್ಷದ ಯುವ ವಿಭಾಗದ ಅಧ್ಯಕ್ಷ ಸತ್ಯಕಂ ಪಟ್ನಾಯಕ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರಿಂದಾಗಿ ವ್ಯಕ್ತಿಯೊಬ್ಬ ಅಂಬುಲೆನ್ಸ್ ವ್ಯವಸ್ಥೆ ಸಿಗದೆ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ತೆರಳಿದಾಗ ವಲಸೆ ಕಾರ್ಮಿಕ ಐದಾರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿರುವುದನ್ನು ಕಂಡರು.

PPE KIT

ಇತ್ತ ಕಾರ್ಮಿಕನ ಕುಟುಂಬಸ್ಥರಿಗೆ ಅಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಸಹಾಯ ಮಾಡಲು ಕೂಡ ಯಾರೂ ಮುಂದೆ ಬರುತ್ತಿರಲಿಲ್ಲ. ಕಾರ್ಮಿಕನಿಗೆ ಕೊರೊನಾ ವೈರಸ್ ತಗಲಿರಬಹುದೆಂಬ ಶಂಕೆಯಿಂದ ಯಾರೂ ಸಹಾಯಕ್ಕೆ ಬಂದಿರಲಿಲ್ಲ.

ಈ ಬಗ್ಗೆ ತಿಳಿದುಕೊಂಡು, ಒಬ್ಬ ವ್ಯಕ್ತಿಯನ್ನು ಇಂತಹ ಪರಿಸ್ಥಿಯಲ್ಲಿ ಹೀಗೆ ಬಿಡುವುದು ಸರಿಯಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಬೈಕ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡೆ. ಅಲ್ಲದೆ ಮೆಡಿಕಲ್ ಶಾಪ್ ಗೆ ತೆರಳಿ ಪಿಪಿಇ ಕಿಟ್ ಖರೀದಿಸಿದೆ. ಬಳಿಕ ವ್ಯಕ್ತಿಯ ಮನೆಗೆ ತೆರಳಿ ಆತನನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಪಟ್ನಾಯಕ್ ತಿಳಿಸಿದರು.

PPE kit

 

ಕಾರ್ಮಿಕನ ಪತ್ನಿ ಹಾಗೂ ಮಕ್ಕಳು ಸ್ಥಿತಿಯ ಬಗ್ಗೆ ಕಣ್ಣೀರು ಹಾಕಿದರು. ಅಲ್ಲದೆ ಪತ್ನಿ ಕಾರ್ಮಿಕನ ಜೊತೆ ಆಸ್ಪತ್ರೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ನಾನು ಅವರ ಮನವೊಲಿಸಿ ಕಾರ್ಮಿಕನನ್ನು ಬೈಕಿನಲ್ಲಿ ಕೂರಿಸಿಕೊಂಡು ಗೋಪಿಬಲ್ಲವಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿರುವುದಾಗಿ ಹೇಳಿದರು.

ಆಸ್ಪತ್ರೆಯಲ್ಲಿ ವೈದ್ಯರು ಕಾರ್ಮಿಕನನ್ನು ಪರೀಕ್ಷಿಸಿ, ಕೆಲವೊಂದು ಔಷಧಿಗಳನ್ನು ನಿಡಿ ಮನೆಯಲ್ಲಿರುವಂತೆ ಸೂಚಿಸಿದರು. ನಂತರ ಪುನಃ ಕಾರ್ಮಿಕನನ್ನು ಅವರ ಮನೆಗೆ ಬಿಟ್ಟು ಬಂದೆ ಎಂದರು. ಸದ್ಯ ಪಟ್ನಾಯಕ್ ಅವರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *