– ಕೊರೊನಾ ಪಾಸಿಟಿವ್ ಡ್ರಾಮಾ ಮಾಡಿ ಪ್ರಿಯಕರನೊಂದಿಗೆ ಎಸ್ಕೇಪ್
– ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪತಿ
ಬೆಂಗಳೂರು: ಪ್ರಿಯಕರನ ಜೊತೆ ಓಡಿಹೋಗಲು ಕೊರೊನಾ ಪಾಸಿಟಿವ್ ಡ್ರಾಮಾ ಮಾಡಿದ ಮಹಿಳೆ ಗೆಳೆಯನೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಗರದ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
Advertisement
ಬೊಮ್ಮನಹಳ್ಳಿಯಲ್ಲಿ ರುಚಿಕುಮಾರಿ (28) ಮತ್ತು ವಿಕ್ಕಿ ಕುಮಾರ್ (30) ದಂಪತಿ ವಾಸಿಸುತ್ತಿದ್ದರು. ಇಬ್ಬರೂ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮನೆಯಲ್ಲೇ ಇಬ್ಬರು ಕೆಲಸ ಮಾಡುತ್ತಿದ್ದರು. ಈ ವೇಳೆ ಗಂಡ, ಹೆಂಡತಿ ನಡುವೆ ಜಗಳ ಆರಂಭವಾಗಿತ್ತು. ಲಾಕ್‍ಡೌನ್ ಇದ್ದ ಕಾರಣದಿಂದ ಪತಿ, ಪತ್ನಿಗೆ ಹೊರ ಹೋಗದಂತೆ ತಾಕೀತು ಮಾಡಿದ್ದ. ಈ ನಡುವೆ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆ ಮನೆಯಿಂದ ಹೊರ ಹೋಗಲು ಪ್ಲಾನ್ ಮಾಡಿದ್ದಳು.
Advertisement
Advertisement
ಮಹಿಳೆ ಪ್ಲಾನ್ ಮಾಡಿದಂತೆ ರಾಂಚಿಯ ಗೆಳೆಯ ಮೊಹಮ್ಮದ್ ಗೆ ಕರೆ ಮಾಡಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಹೇಳಿದ್ದಳು. ರಾಂಚಿಯಿಂದ ಬಂದ ಮೊಹಮ್ಮದ್, ಸೆಪ್ಟೆಂಬರ್ 1 ರಂದು ಆಂಬುಲೆನ್ಸ್ ಬಾಡಿಗೆಗೆ ತಂದು ಪಿಪಿಇ ಕಿಟ್ ಧರಿಸಿಕೊಂಡು ಬಿಬಿಎಂಪಿ ಆರೋಗ್ಯ ಅಧಿಕಾರಿ ಎಂದು ಹೇಳಿ ಗಂಡ, ಹೆಂಡತಿ ಇಬ್ಬರ ಸ್ವಾಬ್ ಸಂಗ್ರಹಿಸಿದ್ದ. ಬಳಿಕ 3 ದಿನ ಬಿಟ್ಟು ಪತ್ನಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ಮೊಬೈಲ್‍ಗೆ ಸಂದೇಶ ಕಳುಹಿಸಿದ್ದ. ಅದೇ ದಿನ ಮನೆಯ ಬಳಿ ಬಂದು ಆಕೆಯನ್ನು ಮನೆಯಿಂದ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದ. ಈ ವೇಳೆ ಪತ್ನಿಯ ಪಾಸಿಟಿವ್ ಬಂದಿದ್ದ ಬಗ್ಗೆ ಬಿಯು ನಂಬರ್ ಕೇಳಿದ್ದರೆ ಈಗ ಇಲ್ಲ ಎಂದು ತಿಳಿಸಿ ಅಲ್ಲಿಂದ ತೆರಳಿದ್ದ.
Advertisement
ಮನೆಯಿಂದ ಕರೆದುಕೊಂಡು ಹೋಗುವ ವೇಳೆ ಯಾವ ಆಸ್ಪತ್ರೆ ಎಂದು ಪ್ರಶ್ನೆ ಮಾಡಿದ್ದ ಪ್ರಭುಗೆ ಸ್ಥಳೀಯ ಪ್ರಶಾಂತ್ ಆಸ್ಪತ್ರೆ ಎಂದು ಮೊಹಮ್ಮದ್ ಹೇಳಿದ್ದ. ಅಲ್ಲದೇ ಪತ್ನಿಗೆ ಪಾಸಿಟಿವ್ ಬಂದ ಕಾರಣ ಮೂರು ದಿನ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದ. ಬಳಿಕ ಮೂರು ದಿನ ಆದರೂ ಪತ್ನಿಯಿಂದ ಫೋನ್ ಕರೆ ಬಂದಿರಲಿಲ್ಲ. ಅಲ್ಲದೇ ಆಕೆಯ ನಂಬರಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಪತಿ ಆಸ್ಪತ್ರೆಯ ಬಳಿ ತೆರಳಿ ಪತ್ನಿಗಾಗಿ ಹುಡುಕಾಟ ನಡೆಸಿದ್ದ.
ಕೊನೆಗೆ ಆಸ್ಪತ್ರೆಯಲ್ಲಿ ಪತ್ನಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದ ಪತಿ ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿದ್ದ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ರುಚಿಕುಮಾರಿ ಹಾಗೂ ಪಿಪಿಇ ಕಿಟ್ ಧರಿಸಿ ಬಂದಿದ್ದ ಇಬ್ಬರ ಮೊಬೈಲ್ ನೆಟ್‍ವರ್ಕ್ ಟ್ರ್ಯಾಕ್ ಮಾಡಿದ್ದರು. ಆಗ ಮಹಿಳೆ ದೆಹಲಿಯಲ್ಲಿರುವುದು ಖಚಿತವಾಗಿತ್ತು. ಈ ವೇಳೆ ಆಕೆಯನ್ನು ಸಂಪರ್ಕಿಸಿದ್ದ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದ ಆಕೆ, ನಾನೇ ಸ್ನೇಹಿತನ ಜೊತೆ ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಳು. ಪ್ರಕರಣದ ಸಂಬಂಧ ಸದ್ಯ ಪತಿ, ಪತ್ನಿ ಹಾಗೂ ಸ್ನೇಹಿತ ಮೊಹಮ್ಮದ್ ಹೇಳಿಕೆ ದಾಖಲು ಮಾಡಿಕೊಂಡು ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ.