ಶ್ರೀನಗರ: ಪಾಕಿಸ್ತಾನದಿಂದ ಭಾರತಕ್ಕೆ ಉಗ್ರರು ನುಸುಳಿ ಬರಲು ಕೊರೆದಿದ್ದ 150 ಮೀಟರ್ ಉದ್ದ ಸುರಂಗ ಮಾರ್ಗ ಕಾಶ್ಮೀರ ಗಡಿಯಲ್ಲಿ ಪತ್ತೆಯಾಗಿದೆ.
Advertisement
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದ ಪಕ್ಕದಲ್ಲೇ 150 ಮೀಟರ್ ಉದ್ದದ ಸುರಂಗ ಮಾರ್ಗ ಪತ್ತೆ ಮಾಡಲಾಗಿದೆ ಎಂದು ರಾಷ್ಟ್ರೀಯ ಗಡಿ ಭದ್ರತಾ ಪಡೆ ತಿಳಿಸಿದೆ.
Advertisement
ಹಿರಾನಗರ ಸೆಕ್ಟರ್‍ನ ಬೊಬ್ಬಿಯಾನ್ ಗ್ರಾಮದಲ್ಲಿ 3 ಅಡಿ ಅಗಲ ಮತ್ತು 25 ರಿಂದ 30 ಅಡಿ ಆಳದ ಸುರಂಗ ಮಾರ್ಗ ಪತ್ತೆ ಮಾಡಿದ್ದೇವೆ. ಇದು ಪಾಕಿಸ್ತಾನದಿಂದ ಭಾರತದ ಗಡಿ ಪ್ರದೇಶದೊಳಗೆ 20 ರಿಂದ 30 ಮೀಟರ್‍ನ ಮುಳ್ಳು ತಂತಿಯ ನಡುವೆ ಹಾದು ಬಂದಿದೆ ಎಂದು ಬಿಎಸ್‍ಎಫ್ ಇನ್‍ಸ್ಟೆಕ್ಟರ್ ಜನರಲ್ ಎನ್‍ಎಸ್ ಜಮ್ಮಾಲ್ ತಿಳಿಸಿದ್ದಾರೆ.
Advertisement
Advertisement
ಇದು ಬಿಎಸ್‍ಎಫ್ ಗಡಿ ಭದ್ರತಾ ಪಡೆ ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ 6 ತಿಂಗಳ ಅಂತರದಲ್ಲಿ ಪತ್ತೆ ಹಚ್ಚಿದ ಮೂರನೇ ಸುರಂಗ ಮಾರ್ಗವಾಗಿದೆ. ಸೆಪ್ಟೆಂಬರ್ ನಲ್ಲಿ ಅರ್ನಿಯಾ ಪ್ರದೇಶದಲ್ಲಿ ಇದ್ದ ಸುರಂಗ ಮಾರ್ಗವನ್ನು ಸೇನೆಯು ಪತ್ತೆ ಹಚ್ಚಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಬಿಎಸ್‍ಎಫ್ ಪಡೆಯು ಉಗ್ರರ ಹಲವು ಭಯೋತ್ಪಾದನ ಸಂಚನ್ನು ವಿಫಲಗೊಳಿಸಿರುವುದು ತಿಳಿದು ಬಂದಿದೆ.
ಬಿಎಸ್‍ಎಫ್ ಪಡೆಯು ಕೆಲವು ದಿನಗಳಿಂದ ಸುರಂಗ ಮಾರ್ಗವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ಭಾಗವಾಗಿ ಸುರಂಗ ವಿರೋಧಿ ಕಾರ್ಯಚರಣೆಯನ್ನು ಮಾಡಿ ಯಶಸ್ವಿಯಾಗಿದೆ. ಈ ಸುರಂಗಗಳಲ್ಲಿ ಹಲವು ಮರಳು ಚೀಲಗಳು ಸಿಕ್ಕಿವೆ ಇದು 2016, 2017ರ ವರ್ಷದಲ್ಲಿ ತಯಾರಾಗಿರುವುದು ಎಂದು ಚೀಲದ ಮೇಲಿರುವ ಗುರುತಿನಿಂದ ತಿಳಿದು ಬಂದಿದೆ. ಹಾಗೆ ಈ ಮರಳು ಚೀಲಗಳಲ್ಲಿ ಪಾಕಿಸ್ತಾನದ ಗುರುತಿನ ಐಜಿಯನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸುರಂಗ ಮಾರ್ಗದ ಮೂಲಕ ಒಳಬರುವ ನುಸುಳುಕೊರರ ವಿರುದ್ಧ ಈಗಾಗಲೇ ಸೇನೆ ತನಿಖೆಯನ್ನು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೇನೆ ನಡೆಸುತ್ತಿರುವ ಸುರಂಗ ವಿರೋಧಿ ಕಾರ್ಯಚರಣೆಯಿಂದಾಗಿ ಯಾವುದೇ ನುಸುಳುಕೊರರು ಒಳಬಂದಿರುವ ಪ್ರಕರಣ ಪತ್ತೆಯಾಗಿಲ್ಲ ಎಂದರು.
ನಮ್ಮ ಗಡಿ ಭದ್ರತೆಯನ್ನು ಬಿಎಸ್‍ಎಫ್‍ವಹಿಸಿಕಂಡ ನಂತರ ಸೇನೆ ಮತ್ತು ಪೊಲೀಸ್ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ ದುಷ್ಕೃತ್ಯ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಎನ್‍ಎಸ್ ಜಮ್ಮಾಲ್ ಮಾಹಿತಿ ಹಂಚಿಕೊಂಡರು.