ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈ ವರ್ಷ ಕತ್ತೆಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ವರ್ಷ ಕತ್ತೆಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದೆ. ಸದ್ಯ ಪಾಕಿಸ್ತಾನದಲ್ಲಿ 56 ಲಕ್ಷ ಕತ್ತೆಗಳಿವೆ.
Advertisement
ಪಾಕಿಸ್ತಾನದ ವಿತ್ತ ಸಚಿವ ಶೌಕತ್ ತಾರಿನ್ ಗುರುವಾರ 2020-21ರ ಆರ್ಥಿಕ ಸಮೀಕ್ಷೆ ಅಂಕಿ ಅಂಶಗಳನ್ನು ಪ್ರಕಟಿಸಿದರು. ಚೀನಾಗೆ ರಫ್ತು ಮಾಡಲು ಪಾಕಿಸ್ತಾನದಲ್ಲಿ ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹಾಗಾಗಿ ಈ ವರ್ಷದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಶೌಕತ್ ಮಾಹಿತಿ ನೀಡಿದ್ದಾರೆ. ಚೀನಾದಲ್ಲಿ ಕತ್ತೆಗಳನ್ನ ಔಷಧಿಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಈ ಮೂಲಕ ಕತ್ತೆಗಳ ರಫ್ತು ಮೂಲಕ ಪಾಕ್ ಹೆಚ್ಚು ಆದಾಯವನ್ನ ತನ್ನದಾಗಿಸಿಕೊಳ್ಳುತ್ತಿದೆ.
Advertisement
Advertisement
ಕತ್ತೆಗಳ ಜೊತೆಯಲ್ಲಿ ಎಮ್ಮೆ, ಕುದುರೆ, ಆಡು, ಟಗರು ಮತ್ತು ಒಂಟೆಗಳ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ. ಪಾಕಿಸ್ತಾನ ಕಳೆದ ಕೆಲ ವರ್ಷಗಳಿಂದ ಚೀನಾಗೆ ಹೆಚ್ಚಿನ ಕತ್ತೆಗಳನ್ನು ನಿರ್ಯಾತ ಮಾಡಲಾರಂಭಿಸಿದೆ. ಕತ್ತೆಗಳ ಚರ್ಮದಿಂದ ಸಿದ್ಧವಾಗುವ ಔಷಧಿ ಇಮ್ಯೂನಿಟಿ ಸಿಸ್ಟಂನ್ನು ಸ್ಟ್ರಾಂಗ್ ಮಾಡುವಲ್ಲಿ ಕೆಲಸ ಮಾಡುತ್ತದೆ. ರಕ್ತ ಪ್ರಕ್ರಿಯೆಯನ್ನ ಬಲಪಡಿಸುತ್ತದೆ. ಸದ್ಯ ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.