ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಫ್ ಸ್ಕ್ರೀನ್‍ನಲ್ಲಿ ಸಖತ್ ಡ್ಯಾನ್ಸ್ ಮಾಡಿರುವ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪು ಅಭಿಮಾನಿಗಳು ಮೆಚ್ಚಿ ಶೇರ್ ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಮುಂಗಾರುಮಳೆ’ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಪಂಜಾಬಿ ಶೈಲಿಯ ಡೋಲು ವಾದ್ಯಕ್ಕೆ ಅಪ್ಪು ಕುಣಿದಿದ್ದಾರೆ. ಪಂಜಾಬಿ ಶೈಲಿಯ ಪೇಟಾ ಧರಿಸಿದ್ದಾರೆ. ವಿಶೇಷ ಅಂದ್ರೆ, ಮುಂಗಾರುಮಳೆ ಚಿತ್ರದ ಮ್ಯೂಸಿಕ್‍ಗೆ ಪುನೀತ್ ಡ್ಯಾನ್ಸ್ ಮಾಡಿದ್ದಾರೆ. ಮುಂಗಾರುಮಳೆ ಚಿತ್ರದಲ್ಲಿ ಬರುವ ಸುವ್ವಿ ಸುವ್ವಾಲಿ ಮ್ಯೂಸಿಕ್‍ಗೆ ಅಪ್ಪು ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋದ ಕೊನೆಯಲ್ಲಿ ಪುನೀತ್ ಅಭಿನಯದ ಹುಡುಗರು ಸಿನಿಮಾದ ಪಂಕಜಾ ಹಾಡು ಬರುತ್ತದೆ ಎರಡು ಹಾಡಿಗೆ ಅಪ್ಪು ಹೆಜ್ಜೆ ಹಾಕುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಎಲ್ಲಿ ಮತ್ತು ಯಾವಾಗ ಎನ್ನುವ ಕುರಿತಾಗಿ ನಿಖರವಾದ ಮಾಹಿತಿ ಇಲ್ಲ. ಸಿನಿಮಾದಲ್ಲಿ ಅಪ್ಪು ಹೆಜ್ಜೆ ಹಾಕುತ್ತಿರುವುದನ್ನು ನೋಡುತ್ತಿದ್ದ ಅಭಿಮಾನಿಗಗಳು ಈ ವೀಡಿಯೋವನ್ನು ನೋಡಿ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಹೆಜ್ಜೆ ಹಾಕಿರುವ ಪವರ್ ಸ್ಟಾರ್ ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Boss ????????????????????❤️❤️❤️❤️❤️????????????#Yuvarathnaa #PuneethRajkumar @PuneethRajkumar#KingAppu
Jai power star
????@RSK47858667 follow us and support us ????❤️ pic.twitter.com/5KYSX49g0t
— IT’S KING APPU ERA (@RSK47858667) January 22, 2021
ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್ 1ರಂದು ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿ. ಪ್ರಮುಖ ಪಾತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದಾರೆ.