Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

Bengaluru City

ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

Public TV
Last updated: May 18, 2020 12:15 pm
Public TV
Share
2 Min Read
OM 1
SHARE

ದಶಕಗಳಿಂದೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷಾ ನೆಲದಲ್ಲಿ ಅದೆಂತಹ ತಾತ್ಸಾರದ ಭಾವವಿತ್ತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇಲ್ಲಿ ಬರೀ ರಿಮೇಕ್ ಮಾಡ್ತಾರೆಂಬುದರಿಂದ ಮೊದಲ್ಗೊಂಡು, ಗುಣಮಟ್ಟದವರೆಗೂ ಕನ್ನಡ ಸಿನಿಮಾಗಳ ಬಗ್ಗೆ ಕಂಪ್ಲೇಂಟುಗಳ ಸರಮಾಲೆಗಳೇ ಇದ್ದವು. ಅದಕ್ಕೆ ಕಾರಣ ಸೀಮಿತ ಮಾರುಕಟ್ಟೆ ಎಂಬಂಥ ಸಮಜಾಯಿಷಿಗಳೂ ಈ ದಿಕ್ಕಿನಿಂದ ಕೇಳಿ ಬರುತ್ತಿದ್ದವು. ಅಂತಹ ಕಾಲಘಟ್ಟದಲ್ಲಿ ಎಲ್ಲ ಇಲ್ಲಗಳನ್ನು ಮೀರಿಕೊಂಡು ಪರಭಾಷೆಗಳಲ್ಲಿಯೂ ಅಚ್ಚರಿ ಮೂಡುವಂಥ ಸಿನಿಮಾ ಮಾಡೋದೆಂದರೆ ಅದೊಂದು ಸಾಹಸ. ಅದನ್ನು ಸಾಧ್ಯವಾಗಿಸಿದ್ದು ಉಪ್ಪಿ ನಿರ್ದೇಶನದ `ಓಂ’ ಚಿತ್ರ!

OM 1 1

ಅದಾಗಲೇ ‘ತರ್ಲೆ ನನ್ಮಗ’ ಮತ್ತು ‘ಶ್’ ಎಂಬೆರಡು ಸಿನಿಮಾ ನಿರ್ದೇಶನದ ಬಳಿಕ ಉಪೇಂದ್ರ ಅವರ ಮೂರನೇ ಸಿನಿಮಾ ಓಂ. ಅದೆಷ್ಟೋ ವರ್ಷಗಳಿಂದ ಈ ಕಥೆಯನ್ನು ಹದಗೊಳಿಸಿಕೊಂಡು ಕಾಯುತ್ತಿದ್ದ ಉಪೇಂದ್ರ, ಭೂಗತ ಜಗತ್ತಿನ ಕಥೆ ಹೇಳುತ್ತಿದ್ದಾರೆಂಬ ಸುಳಿವು ಸಿಕ್ಕಾಗ ಅದೆಷ್ಟು ಮಂದಿ ಅಚ್ಚರಿಗೊಂಡಿದ್ದರೋ ಗೊತ್ತಿಲ್ಲ. ಆದರೆ ತುಂಬಾ ಜನ ಇದು ವರ್ಕೌಟ್ ಆಗೋ ಸಂಗತಿ ಅಲ್ಲ ಎಂಬರ್ಥದಲ್ಲಿ ಮೂಗು ಮುರಿದಿದ್ದದ್ದಂತೂ ಸತ್ಯ. ಆದರೆ ಅದು ಬಿಡುಗಡೆಯಾದ ನಂತರದಲ್ಲಿ ಎಲ್ಲ ಚಿತ್ರಣವೂ ಬದಲಾಗಿ ಹೋಗಿತ್ತು.

Om Upendra B

ಇದರಲ್ಲಿನ ಕಥೆ, ನಿರೂಪಣಾ ಶೈಲಿಗೆ ಕನ್ನಡದ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಆ ಕಾಲಕ್ಕೆ ಮಾಧ್ಯಮಗಳು ಈ ಪಾಟಿ ಬೆಳೆದಿಲ್ಲವಾದರೂ ಕೂಡ ತಾನೇ ತಾನಾಗಿ ‘ಓಂ’ ಪ್ರಭೆ ಕನ್ನಡದ ಗಡಿ ದಾಟಿ ಪರಭಾಷೆಗಳತ್ತಲೂ ಹಬ್ಬಿಕೊಂಡಿತ್ತು. ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದರೋ ಅದೇ ಜನ ‘ಓಂ’ ಅನ್ನು ನೋಡಬೇಕೆಂದು ಕಾತರರಾಗಿದ್ದರು. ನಂತರದಲ್ಲಿ ಅದರ ರಿಮೇಕ್ ಹಕ್ಕುಗಳಿಗಾಗಿ ಪರಭಾಷಾ ನಿರ್ಮಾಪಕರ ಕಡೆಯಿಂದ ಪೈಪೋಟಿಯೂ ಆರಂಭವಾಗಿತ್ತು.

Om Upendra A

‘ಓಂ’ 1997ರಲ್ಲಿ ಓಂಕಾರಂ ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಅದರಲ್ಲಿ ರಾಜಶೇಖರ್ ಮತ್ತು ಕನ್ನಡದ ಪ್ರೇಮಾ ನಾಯಕ ನಾಯಕಿಯರಾಗಿ ನಟಿಸಿದ್ದರು. ವಿಶೇಷವೆಂದರೆ, ತೆಲುಗಿನಲ್ಲಿಯೂ ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು. ಅದು ಅಲ್ಲಿಯೂ ದಾಖಲೆಯ ಪ್ರದರ್ಶನವನ್ನೇ ಕಂಡಿತ್ತು. ಇದರಿಂದಾಗಿಯೇ ಬೇರೆ ಭಾಷೆಗಳಲ್ಲಿಯೂ ಕನ್ನಡ ಸಿನಿಮಾದತ್ತ ಬೆರಗಿನ ಮಾತುಗಳು ಕೇಳಿ ಬರಲು ಕಾರಣವಾಗಿತ್ತು. ಆ ನಂತರದಲ್ಲಿ ಓಂ ಅರ್ಜುನ್ ಪಂಡಿತ್ ಎಂಬ ಶೀರ್ಷಿಕೆಯಲ್ಲಿ ಹಿಂದಿಗೂ ರೀಮೇಕ್ ಆಗಿ ತೆರೆಗಂಡಿತ್ತು.

OM

ಆ ಬಳಿಕ ‘ಓಂ’ನ ಸ್ಫೂರ್ತಿಯಿಂದಲೇ ಪರಭಾಷೆಗಳಲ್ಲಿ ಒಂದಷ್ಟು ಸಿನಿಮಾಗಳು ತಯಾರುಗೊಂಡಿದ್ದವು. ಸೂಪರ್ ಹಿಟ್ ಚಿತ್ರಗಳೇ ಕನ್ನಡದ ‘ಓಂ’ನಿಂದ ಸ್ಫೂರ್ತಿಗೊಂಡಂತೆ ಅಣಿಗೊಳ್ಳಲಾರಂಭಿಸಿದವು. ಹಾಗೆ ಮೊದಲ ಸಲ ದೊಡ್ಡ ಮಟ್ಟದಲ್ಲಿ ಕನ್ನಡದ ಘನತೆಯನ್ನು ಪರಭಾಷಾ ಚಿತ್ರರಂಗಗಳಲ್ಲಿಯೂ ಹಬ್ಬಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ನಿಸ್ಸಂದೇಹವಾಗಿ ‘ಓಂ’ಗೆ ಸಲ್ಲುತ್ತದೆ. ಹೀಗೆ ಕೆದಕುತ್ತಾ ಹೋದರೆ, ‘ಓಂ’ನ ದಾಖಲೆಗಳು ದಂಡಿ ದಂಡಿಯಾಗಿಯೇ ಕಾಣಸಿಗುತ್ತವೆ. ಇಂದಿಗೆ ಆ ಸಿನಿಮಾ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದರ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲೊಂದು ಸಂಭ್ರಮ ಮಡುಗಟ್ಟಿದೆಯಲ್ಲಾ? ಅದು ಸಿನಿಮಾ ಸೃಷ್ಟಿಕರ್ತರ ಆಲೋಚನಾ ಕ್ರಮವನ್ನೇ ಬದಲಾಯಿಸಿಬಿಟ್ಟ `ಓಂ’ಕಾರದ ಅಸಲೀ ಖದರ್ ಅನ್ನಲಡ್ಡಿಯಿಲ್ಲ!.

TAGGED:bengalurukannada cinemaOmsandalwoodupendraಉಪೇಂದ್ರಓಂಕನ್ನಡ ಸಿನಿಮಾಬೆಂಗಳೂರುಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows
jayant kaikini bengaluru international film festival
ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್‌ ಕಾಯ್ಕಿಣಿ
Cinema Latest Main Post Sandalwood
NK Rajesh Naidu
ʼಸುಖೀಭವ’ ಎನುತ್ತಾ ಸ್ಯಾಂಡಲ್‌ವುಡ್‌ಗೆ ಬಂದ ಡೈರೆಕ್ಟರ್ ಎನ್.ಕೆ ರಾಜೇಶ್ ನಾಯ್ಡು
Cinema Latest Sandalwood Top Stories
Mia Khalifa
Viral | 71 ವರ್ಷದ ʻಮಿಸ್ಟರ್ ಬೀನ್ʼ ಜೊತೆ 32 ರ ಮಿಯಾ ಖಲೀಫಾ ಡೇಟಿಂಗ್‌?
Cinema Latest World

You Might Also Like

CID Raid
Bengaluru City

ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್ – ಏಕಕಾಲಕ್ಕೆ ನೂರಾರು ಕಡೆ ದಾಳಿ

Public TV
By Public TV
26 minutes ago
Fire breaks out in over 100 sheds of illegal Bengali migrants Bengaluru
Bengaluru City

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ 100ಕ್ಕೂ ಹೆಚ್ಚು ಶೆಡ್‌ಗಳಿಗೆ ಬೆಂಕಿ

Public TV
By Public TV
30 minutes ago
Lucky Oberoi 1
Crime

ಪಂಜಾಬ್‌ನಲ್ಲಿ ಗುಂಡಿಟ್ಟು ಆಪ್‌ ನಾಯಕನ ಹತ್ಯೆ

Public TV
By Public TV
2 hours ago
Belagavi 1
Belgaum

ಮಹಿಳಾ ಅಧಿಕಾರಿಯ ಬೆಡ್‌ರೂಮ್‌ ವಿಡಿಯೋ ಸೆರೆ ಹಿಡಿದು 50 ಲಕ್ಷಕ್ಕೆ ಬ್ಲ್ಯಾಕ್‌ಮೇಲ್‌ – ನಕಲಿ ಪತ್ರಕರ್ತರು ಅರೆಸ್ಟ್‌

Public TV
By Public TV
2 hours ago
Pay and Parking 2
Districts

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೀಸಲಾಗಿದ್ದ ಸರ್ಕಾರಿ ಜಾಗದಲ್ಲಿ ಪೇ & ಪಾರ್ಕ್ ವ್ಯವಹಾರ: ಒತ್ತುವರಿ ತೆರವು

Public TV
By Public TV
2 hours ago
ballot paper counting india
Bagalkot

ಬ್ಯಾಲೆಟ್‌ ಪೇಪರ್‌ನಲ್ಲಿ ಪಂಚಾಯತ್‌ ಚುನಾವಣೆ – ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?