ಪಬ್ಲಿಕ್ ಹೀರೋ, ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

Public TV
2 Min Read
Ramanna Byati Public Hero GDG 1

ಗದಗ: 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗದಗ ಜಿಲ್ಲೆಯ ಇಬ್ಬರು ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಗರದ ಬೆಟಗೇರಿಯ ಪಬ್ಲಿಕ್ ಹೀರೋ ರಾಮಣ್ಣ ಬ್ಯಾಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಗರದ ಬಿ.ಎಫ್ ದಂಡಿನ ಅವರಿಗೆ ಲಭಿಸಿದೆ.

Ramanna Byati Public Hero GDG 5

ವಿಶೇಷ ಚೇತನ ರಾಮಣ್ಣ ಬ್ಯಾಟಿ ಅವರ ಸಾಹಿತ್ಯ ಸಾಧನೆ ಕುರಿತು ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿ ಬಂದ ನಂತರ ಎರಡು ಬಾರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯೋತ್ಸವ ಪ್ರಶಸ್ತಿ ರಾಮಣ್ಣ ಅವರ ಮುಡಿಗೇರಿದೆ. ಇದು ಪಬ್ಲಿಕ್ ಟಿವಿ ಇಂಪ್ಯಾಕ್ಟ್. ಇಂದು ಸರ್ಕಾರ ಪಟ್ಟಿ ಪ್ರಕಟಿಸುತ್ತಿದ್ದಂತೆ ಮನೆಯಲ್ಲಿ ಹಬ್ಬದ ವಾತಾವರಣ. ಕುಟುಂಬಸ್ಥರು ಒಟ್ಟಾಗಿ ಸಿಹಿ ತಿನಿಸಿ ಸಂಭ್ರಮಿಸಿದರು.

Ramanna Byati Public Hero GDG 4

ರಾಮಣ್ಣ ಅನಕ್ಷರಸ್ಥ, ಇಂದಿಗೂ ಓದಲು ಬರೆಯಲು ಬರೋದಿಲ್ಲ, ಕಣ್ಣು ಕಾಣುವುದಿಲ್ಲ, ಕಿವಿ ಸಹ ಅಲ್ಪಸ್ವಲ್ಪ ಮಾತ್ರ ಕೇಳಿಸುವ ವಿಶೇಷ ಚೇತನ ಸಾಹಿತಿ. ಮಕ್ಕಳು, ಸ್ನೇಹಿತರು ಇವರು ಹೇಳಿದಂತೆ ಬರೆಯುತ್ತಾರೆ. ಗಾಡ್ ಗಿಫ್ಟ್ ಅನ್ನುವಂತೆ ಇಲ್ಲಿಯವರೆಗೆ ಸುಮಾರು 30 ಸಾವಿರ ಪದ್ಯಗಳು, 50ಕ್ಕೂ ಅಧಿಕ ಗ್ರಂಥಗಳು, 20ಕ್ಕೂ ಅಧಿಕ ಪುರಾಣಗಳು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಪುರಾಣ, ಬಸವ ಪುರಾಣ, ಬುದ್ಧ ಪುರಾಣ, ಇಟಗಿ ಭೀಮಾಂಬಿಕೆ ಪುರಾಣ, ಶಂಕರಾಚಾರ್ಯರ ಪುರಾಣ ಹೀಗೆ ಅನೇಕ ಪುರಾಣಗಳನ್ನು ಬರೆದಿದ್ದಾರೆ. ನೂರಾರು ಚಟುವಟಿಕೆಗಳನ್ನು ಬರೆದಿದ್ದಾರೆ.

Ramanna Byati Public Hero GDG 3

ಇವರು ಬರೆದ ಕೃತಿಗಳು ಭಾಮಿನಿ ಷಟ್ಪದಿ, ಗದ್ಯ, ಪದ್ಯ, ಚೌಪದಿ ರೂಪದಲ್ಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಮಣ್ಣ ಅವರು ಬರೆದ 60ಕ್ಕೂ ಅಧಿಕ ಕೃತಿಗಳು ಬಿಡುಗಡೆ ಆಗಬೇಕಿವೆ. 4 ಸಾವಿರ ಪದ್ಯದ ರಾಮಾಯ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದಕ್ಕೆಲ್ಲಾ ಸ್ಪೂರ್ತಿ ಮಗ ದಾನೇಶ. ಮಗಳು ಗಾಯತ್ರಿ ಹಾಗೂ ಸ್ನೇಹಿತರ ಬಳಗದವರು ಇವರು ಹೇಳಿದ ಗ್ರಂಥಗಳನ್ನು ಬರೆಯುತ್ತಾರೆ. ಇದನ್ನೂ ಓದಿ: ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

Ramanna Byati Public Hero GDG 2

ಗದಗ ತಾಲೂಕಿನ 3 ನೇ ಕನ್ನಡ ಸಾಹಿತ್ಯ ಸಮ್ಮೇಳ ಹಾಗೂ ರಾಮದುರ್ಗ ತಾಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರ ಸಾಧನೆಗೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ವೇದಿಕೆಯಲ್ಲಿ ಸುದ್ದಿ ಪ್ರಸಾರದ ನಂತರ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Share This Article
Leave a Comment

Leave a Reply

Your email address will not be published. Required fields are marked *