ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಪೂಜೆ ಮಾಡಿ ನೀರಿನಲ್ಲಿ ಆಂಜನೇಯನ ವಿಗ್ರಹ ವಿಸರ್ಜನೆ

Public TV
1 Min Read
NML Anjaneya Statue

ಬೆಂಗಳೂರು: ಆಂಜನೇಯನಿಗೆ ಅಪಮಾನ ಮಾಡಿದ ವಿಚಾರ ಸಂದರ್ಭವಾಗಿ ವರದಿ ಮಾಡಿದ್ದ, ನಿಮ್ಮ ಪಬ್ಲಿಕ್ ಟಿವಿ ವರದಿ ಬಳಿಕ ತಪ್ಪಾಯಿತು ಕ್ಷಮಿಸು ಎಂದು ಆಂಜನೇಯನ ಪಾದಕ್ಕೆ ಅಧಿಕಾರಿಗಳು ಎರಗಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಡಾ.ರಾಜ್‍ಕುಮಾರ್ ಸರ್ಕಲ್ ಬಳಿಯಲ್ಲಿದ್ದ ತಪಸ್ವಿ ವೀರಾಂಜನೇಯ ಸ್ವಾಮಿ ದೇಗುಲವನ್ನು ತಾಲೂಕು ಆಡಳಿತ ತಹಶೀಲ್ದಾರ್ ಕೆ.ಮಂಜುನಾಥ್ ನೇತೃತ್ವದಲ್ಲಿ ತೆರವು ಮಾಡಿದ್ದರು. Public Tv IMPACT ತೆರವು ಮಾಡಿದ ನಂತರ ತಪಸ್ಸಿಗೆ ಕೂತ ಭಂಗಿಯಲ್ಲಿದ್ದ ಶ್ರೀ ಆಂಜನೇಯ ಸ್ವಾಮಿಯ ವಿಗ್ರಹವನ್ನು ನಗರಸಭೆಯವರು ಕಸ ಸುರಿಯುವ ಜಾಗದಲ್ಲಿ ಬಿಸಾಡಿ ಸ್ವಾಮಿಗೆ ಅಪಮಾನ ಮಾಡಿದ್ದರು. ಆಂಜನೇಯನ ವಿಗ್ರಹವನ್ನು ಕಸದ ರಾಶಿಯಲ್ಲಿ ಬಿಸಾಡಿದ್ದನ್ನು ನೋಡಿದ ಭಕ್ತರು ಸಾಮಾಜಿಕ ಜಾಲತಾಣದಲ್ಲೂ ಕೂಡ ತೀವ್ರವಾಗಿ ಖಂಡನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

NML Anjaneya Statue 1

ಜೊತೆಗೆ ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ತಕ್ಷಣ, ಎಚ್ಚೆತ್ತ ನಗರಸಭೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಆಂಜನೇಯನ ವಿಗ್ರಹವನ್ನು ಅಲ್ಲಿದ ಕೆರೆಯ ಬಳಿ ತೆಗೆದುಕೊಂಡು ಹೋಗಿ ವಿಗ್ರಹಕ್ಕೆ ಪೂಜೆ ನೆರವೇರಿಸಿ ಕೆರೆಯಲ್ಲಿ ವಿಸರ್ಜಿಸಿದ್ದಾರೆ.

NML Anjaneya Statue 2

ಒಟ್ಟಾರೆಯಾಗಿ ಕೆಟ್ಟ ಮೇಲೆ ಬುದ್ಧಿ ಕಲಿತ ಅಧಿಕಾರಿಗಳು ಶ್ರೀ ಸ್ವಾಮಿಯನ್ನು ಭಕ್ತಿ ಭಾವದಿಂದ ಪೂಜೆ ಪುರಸ್ಕಾರ ಸಲ್ಲಿಸಿ ನೀರಿನಲ್ಲಿ ವಿಸರ್ಜನೆ ಮಾಡಿ ತಪ್ಪಾಯಿತು ಎಂದು ಬೀಳ್ಕೊಟ್ಟಿದ್ದಾರೆ. ಇದನ್ನೂ ಓದಿ: 3ನೇ ಬಾರಿಯೂ ಕೈತಪ್ಪಿದ ಸಚಿವ ಸ್ಥಾನ – ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕುಮಾರಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *